ಕಲ್ಪ ಮೀಡಿಯಾ ಹೌಸ್ | ಸೊರಬ |
ಜಾತ್ಯತೀತ ಜನತಾದಳ ಅಭ್ಯರ್ಥಿಯಾದ ಬಾಸೂರು ಚಂದ್ರೇಗೌಡರು ಕಳೆದ 45 ವರ್ಷಗಳಿಂದ ಜನಪರವಾದ ಹೋರಾಟ ಮಾಡುತ್ತಾ ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನ ಮಾನಸದಲ್ಲಿ ನೆಲೆಗೊಂಡಿರುವ ಇವರು ಈ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಶಿವಪ್ಪ ವಕೀಲ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ರವರ ಜನ ಮನ್ನಣೆಯನ್ನು ಸಹಿಸದ ವಿರೋಧ ಪಕ್ಷದವರು ಚಂದ್ರೇಗೌಡರು ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಲ್ಲಲ್ಲಿ ಅಪಪ್ರಚಾರ ಮಾತುಗಳು ಕೇಳಿಬರುತ್ತಿವೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಮತದಾರರು ಯಾವುದೇ ಇಂತಹ ಸುಳ್ಳು ಸುದ್ದಿಗಳಿಗೆ ಗಮನ ನೀಡಬಾರದು ಎಂದರು.
ಹೊಂದಾಣಿಕೆಯ ರಾಜಕಾರಣ ಮಾಡುವ ಉದ್ದೇಶದಿಂದ ಚಂದ್ರೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿದ್ದರೆ ತಾಲೂಕಿನ 239 ಬೂತ್’ಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು, ಗೆಲುವಿನ ಹೊಸ್ತಿಲಲ್ಲಿರುವ ಚಂದ್ರೇಗೌಡರ ಜನ ಬೆಂಬಲ ಸಹಿಸದೆ ಇರುವವರು ಈ ರೀತಿ ಮಾಡುತ್ತಿದ್ದಾರೆ ಎಂದರು.
ಪಟ್ಟಣದ ಜೆಡಿಎಸ್ ಪಕ್ಷ ದ ಅಧ್ಯಕ್ಷ ಶ್ರೀಧರ್ ಶೇಟ್, ಎಸ್’ಸಿ ಘಟಕದ ಅಧ್ಯಕ್ಷ ಕುಮಾರ್, ಮುಖಂಡರಾದ ಶಿವಮೂರ್ತಿ, ಸಂತೋಷ್, ಚಂದ್ರಪ್ಪ, ತುಳಜಪ್ಪ, ರಾಮಪ್ಪ, ಮಂಜುನಾಥ್, ಪ್ರವೀಣ್, ಮನೋಜ್, ಸೇರಿದಂತೆ ಮೊದಲಾದವರಿದ್ದರು.
(ವರದಿ: ಮಧುರಾಮ್, ಸೊರಬ)


















