ಕಲ್ಪ ಮೀಡಿಯಾ ಹೌಸ್ | ಮೈಸೂರು |
ತುರ್ತು ಸಂದರ್ಭದಲ್ಲಿ ನೆರವಾಗುವ ತಂತ್ರಜ್ಞಾನ ಅಭಿವೃದ್ಧಿ ಪಡಿಸುವತ್ತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಮೈಸೂರು ವಿವಿ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ. ಬಿ. ಶಂಕರ್ ಹೇಳಿದರು.
ಅವರು ಮೈಸೂರು ವಿಶ್ವವಿದ್ಯಾಲಯದ #MysoreUniversity ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಂಯುಕ್ತವಾಗಿ ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ಪರಿಚಯಾತ್ಮಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇವಲ ಪಠ್ಯವನ್ನು ಅಧ್ಯಯನ ಮಾಡಿದರೆ ಸಾಲದು. ಜ್ಞಾನದೊಂದಿಗೆ ಕೌಶಲ್ಯವನ್ನೂ ರೂಢಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.
ಜಗತ್ತು ಹೊಸತನವನ್ನು ಅನ್ವೇಷಣೆ ಮಾಡುತ್ತಿರುವ ಕಾಲಘಟ್ಟದಲ್ಲೇ ನಾವು ಸ್ಥಳೀಯವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ #Technology ಬಳಸಿ ಇವುಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ರೋಬಾಟಿಕ್ ತಂತ್ರಜ್ಞಾನದ #RoboticTechnology ನೆರವಿನಿಂದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು.
ಭಾರತದ ಇಂಜಿನಿಯರ್‌ಗಳಿಗೆ ಜಾಗತಿಕ ಮಾನ್ಯತೆ ಇದೆ. ಕ್ರಿಯಾಶೀಲರಿಗೆ ವಿಶ್ವದಾದ್ಯಂತ ಉದ್ಯೋಗ ಅವಕಾಶಗಳು ತೆರೆದಿವೆ. ಹಾಗಾಗಿ ಟೀಂ ವರ್ಕ್ ಮೂಲಕ ವಿದ್ಯಾರ್ಥಿಗಳು ಹೊಸ ಸಂಶೋಧನೆಯತ್ತ ಗಮನ ಹರಿಸಬೇಕು ಎಂದು ಪ್ರೊ. ಶಂಕರ್ ಹೇಳಿದರು.
ಅತಿರೇಕದ ಚಟುವಟಿಕೆ ಬೇಡ
ಮೊಬೈಲ್ #Mobile ಫೋನಿನಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಕರ್ಯಗಳನ್ನು ಬಳಸಿ ಕೆಲವು ವಿದ್ಯಾರ್ಥಿಗಳು ಅತಿರೇಕದ ಚಟುವಟಿಕೆ ಮಾಡುತ್ತಿದ್ದಾರೆ. ಇವುಗಳು ಬೆಳವಣಿಗೆಗೆ ಪೂರಕವಲ್ಲ ಎಂಬ ಪರಿಜ್ಞಾನ ಇರಬೇಕು ಎಂದು ಪ್ರೊ. ಅನಂತ ಪದ್ಮನಾಭ ಎಚ್ಚರಿಕೆ ನೀಡಿದರು. ನಮ್ಮ ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪಾಲಕರು ಹೆಮ್ಮೆ ಹೊಂದಿರುತ್ತಾರೆ. ಅವರ ನಂಬಿಕೆ ಮತ್ತು ವಿಶ್ವಾಸಗಳಿಗೆ ಧಕ್ಕೆ ತರುವ ಯಾವುದೇ ಕಾರ್ಯ ಮಾಡಿದರೂ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದರು. ವಿದ್ಯಾರ್ಥಿಗಳು ತಮಗಿರುವ ಎಲ್ಲ ಸೌಕರ್ಯ ಬಳಸಿಕೊಂಡು ಪ್ರಗತಿ ಹೊಂದಬೇಕು. ವಿವಿಗೆ ಗೌರವ ತಂದುಕೊಡುವ ಮಟ್ಟದಲ್ಲಿ ಬೆಳೆಯಬೇಕು. ಸಂಪನ್ಮೂಲ ವ್ಯಕ್ತಿಗಳ ವಿಚಾರಧಾರೆಗಳನ್ನು ಕೇಳಿ ಅದರಿಂದ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತದ ಇಂಜಿನಿಯರ್‌ಗಳಿಗೆ ಜಾಗತಿಕ ಮಾನ್ಯತೆ ಇದೆ. ಕ್ರಿಯಾಶೀಲರಿಗೆ ವಿಶ್ವದಾದ್ಯಂತ ಉದ್ಯೋಗ ಅವಕಾಶಗಳು ತೆರೆದಿವೆ. ಹಾಗಾಗಿ ಟೀಂ ವರ್ಕ್ ಮೂಲಕ ವಿದ್ಯಾರ್ಥಿಗಳು ಹೊಸ ಸಂಶೋಧನೆಯತ್ತ ಗಮನ ಹರಿಸಬೇಕು ಎಂದು ಪ್ರೊ. ಶಂಕರ್ ಹೇಳಿದರು.
ಸಂಸ್ಕೃತಿಯೂ ಇರಲಿ
ಮೈಸೂರು ವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್ ನಿರ್ದೇಶಕ ಪ್ರೊ. ಟಿ. ಅನಂತ ಪದ್ಮನಾಭ ಮಾತನಾಡಿ, ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಂಸ್ಕೃತಿಯೊಂದಿಗೆ ಸಾಮಾಜಿಕ ಕಳಕಳಿಯೂ ಇರಬೇಕು ಎಂದರು. ಆಧುನಿಕ ಬುದ್ಧಿಮತ್ತೆ (ಎಐ) ಇಂದು ಅತ್ಯಂತ ಶಕ್ತಿಯುತ ಸಾಧನವಾಗಿ ವಿಶ್ವಮಟ್ಟದಲ್ಲಿ ಬೇಡಿಕೆ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ನಮ್ಮ ತಾಂತ್ರಿಕ ಶಾಲೆ ವಿಶೇಷ ಕೋರ್ಸ್’ಗಳನ್ನು ಹೊಂದಿದ್ದು, ಶ್ರದ್ಧೆಯಿಂದ ಅಧ್ಯಯನ ಮಾಡಿ ಉನ್ನತ ಮಟ್ಟದ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
5 ದಿನಗಳ ಕಾಲ ಹಮ್ಮಿಕೊಂಡಿರುವ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ವಿವಿಧ ವಿಷಯ ತಜ್ಞರು ಮತ್ತು ಸಾಧಕರು ವಿದ್ಯಾರ್ಥಿಗಳಿಗೆ ಮುಖಾಮುಖಿಯಾಗಲಿದ್ದಾರೆ. ಪಠ್ಯಜ್ಞಾನದೊಂದಿಗೆ ಸಾಮಾಜಿಕ ಆಗುಹೋಗುಗಳನ್ನೂ, ವರ್ತಮಾನದ ಸಂಗತಿಗಳನ್ನು ಅರ್ಥಮಾಡಿಕೊಂಡರೆ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ತಾಂತ್ರಿಕ ಶಿಕ್ಷಣ ಪಡೆಯುವವರು ಉನ್ನತ ಹುದ್ದೆ ಪಡೆಯುದ ಧ್ಯೇಯದೊಂದಿಗೆ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಸಮರ್ಥರಾಗಬೇಕು.
ಈ ನಿಟ್ಟಿನಲ್ಲಿ ಪರಿಚಯಾತ್ಮಕ ಕಾರ್ಯಕ್ರಮ ಪೂರಕವಾಗಲಿದೆ ಎಂದು ಅವರು ಆಶಿಸಿದರು. ಸ್ಕೂಲ್ ಆಫ್ ಇಂಜಿನಿಯರಿಂಗ್’ನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಸಂತೋಷ್, ಸುಮಾ, ಸಚಿನ್, ನಿತಿನ್, ರಾಕೇಶ್, ಸಂಪನ್ಮೂಲ ವ್ಯಕ್ತಿ ಅಮಿತ್ ಶರ್ಮಾ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















