No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Friday, May 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕುಸಿಯುತ್ತಿದೆ ಪ್ರಜ್ಞಾವಂತರ ಜಿಲ್ಲೆ ಶಿವಮೊಗ್ಗದ ಎಸ್’ಎಸ್’ಎಲ್’ಸಿ ಫಲಿತಾಂಶ!

ಕಳೆದ ಬಾರಿಗೂ ಈ ವರ್ಷ ಎಷ್ಟಕ್ಕೆ ಕುಸಿದಿದೆ? | ಇಲ್ಲಿದೆ ಏಳು ವರ್ಷಗಳ ಫಲಿತಾಂಶ | ಗಂಭೀರವಾಗಿ ಚಿಂತಿಸುವ ತುರ್ತು ಅಗತ್ಯವಿದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 9, 2023
in ಶಿವಮೊಗ್ಗ
0
ಕುಸಿಯುತ್ತಿದೆ ಪ್ರಜ್ಞಾವಂತರ ಜಿಲ್ಲೆ ಶಿವಮೊಗ್ಗದ ಎಸ್’ಎಸ್’ಎಲ್’ಸಿ ಫಲಿತಾಂಶ!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಅನಿರುದ್ಧ ವಸಿಷ್ಠ ಎಸ್.ಆರ್.  |

2022-23ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ #SSLCResult ಇಂದು ಪ್ರಕಟಗೊಂಡಿದ್ದು, ಶಿವಮೊಗ್ಗ #Shivamogga ಜಿಲ್ಲೆ ಶೇ.84.04ರಷ್ಟು ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 29ನೆಯ ಸ್ಥಾನದಲ್ಲಿದೆ.

ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಕುಸಿತಗೊಂಡಿದ್ದು, ಇಳಿಕೆಯ ಹಾದಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ.
ಹೌದು… ಪ್ರಜ್ಞಾವಂತರು, ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಳ್ಳುವ ಶಿವಮೊಗ್ಗ ಎಸ್’ಎಸ್’ಎಲ್’ಸಿ ಫಲಿತಾಂಶದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತಗೊಳ್ಳುತ್ತಿದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕ ಹಾಗೂ ಬಯಲುಸೀಮೆಯ ಕೆಲವು ಜಿಲ್ಲೆಗಳು ದಶಕಗಳ ಕಾಲದಿಂದಲೂ ಕೊನೆಯ ಸ್ಥಾನಗಳಲ್ಲಿರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಜಿಲ್ಲೆಗಳು ಮೇಲುಗೈ ಸಾಧಿಸುತ್ತಿದ್ದು, ಶಿವಮೊಗ್ಗ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ.

ಎಷ್ಟು ಕಡಿಮೆಯಾಗುತ್ತಿದೆ?
ಪ್ರಸಕ್ತ ವರ್ಷ ಶೇ.84.04ರಷ್ಟು ಫಲಿತಾಂಶ ಗಳಿಸುವ ಮೂಲಕ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 29ನೆಯ ಸ್ಥಾನದಲ್ಲಿದೆ. 2022ರಲ್ಲಿ ಶೇ.84.60ರಷ್ಟು ಫಲಿತಾಂಶದ ಮೂಲಕ 26ನೆ ಸ್ಥಾನದಲ್ಲಿತ್ತು. ಅಂದರೆ ಕಳೆದ ಬಾರಿಗಿಂತಲೂ ಶೇ.0.56ರಷ್ಟು ಕಡಿಮೆ ಫಲಿತಾಂಶ ಗಳಿಸಿದ್ದರೆ, 26ರಿಂದ 29ನೆಯ ಸ್ಥಾನಕ್ಕೆ ಕುಸಿದಿದೆ.

2016-17ರಲ್ಲಿ ಶೇ.75.01, 2017-18ರಲ್ಲಿ ಶೇ.78.75 ರಷ್ಟು ಫಲಿತಾಂಶ ದಾಖಲಾಗಿದ್ದು, 2019ರಲ್ಲಿ ವ್ಯಾಪಿಸಿದ್ದ ಕರೋನಾ ಸೋಂಕಿನ ಕಾರಣದಿಂದಾಗಿ ಎಲ್ಲ ವಿದ್ಯಾರ್ಥಿಗಳಲ್ಲಿ ಉತ್ತೀರ್ಣ ಮಾಡಲಾಗಿತ್ತು. ಆ ವರ್ಷ ಶೇ.79.13ರಷ್ಟು ಫಲಿತಾಂಶ ದಾಖಲಾಗಿತ್ತು.
ಆನಂತರ 2020ರಲ್ಲಿ ಪ್ರತಿವರ್ಷದಂತೆ ಪರೀಕ್ಷಾ ಪ್ರಕ್ರಿಯೆಗಳು ನಡೆದಿದ್ದು, ಶಿವಮೊಗ್ಗ ಜಿಲ್ಲೆ ಶೇ.81.75 ಫಲಿತಾಂಶ ದಾಖಲಿಸಿತ್ತು. 2021ರಲ್ಲಿ `ಎ’ ಗ್ರೇಡ್ ಪಡೆದಿದ್ದ ಶಿವಮೊಗ್ಗ ಜಿಲ್ಲೆ 2022ರಲ್ಲಿ ಶೇ.84.60ರಷ್ಟು ಫಲಿತಾಂಶದ ಮೂಲಕ 26ನೆಯ ಸ್ಥಾನದಲ್ಲಿದ್ದರೆ 2023ರ ಪ್ರಸಕ್ತ ವರ್ಷದಲ್ಲಿ ಶೇ.84.04ರಷ್ಟು ಫಲಿತಾಂಶದ ಮೂಲಕ 29ನೆಯ ಸ್ಥಾನಕ್ಕೆ ಕುಸಿದಿದೆ.

2016ರಿಂದ 2022ರವರೆಗಿನ ಫಲಿತಾಂಶ ಏರಿಕೆಯ ಹಾದಿಯಲ್ಲಿದ್ದರೂ 2022ಕ್ಕೆ ಹೋಲಿಸಿದರೆ 2023ರ ಈ ಬಾರಿ ಮೂರು ಸ್ಥಾನಗಳಲ್ಲಿ ಏಕಾಏಕಿ ಕುಸಿದಿರುವುದು ಯಾಕೆ ಎಂಬ ಪ್ರಶ್ನೆಯನ್ನು ಮೂಡಿಸಿದೆ.

ಗಂಭೀರವಾಗಿ ಚಿಂತಿಸುವ ತುರ್ತು ಅಗತ್ಯವಿದೆ
ಕಳೆದ ವರ್ಷಕ್ಕಿಂತಲೂ ಈ ವರ್ಷ ಏಕಾಏಕಿ 3 ಸ್ಥಾನಗಳು ಕುಸಿದಿರುವುದು ನಿರ್ಲಕ್ಷ ಮಾಡುವ ವಿಚಾರವಲ್ಲ.
ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿರುವ ಚಿತ್ರದುರ್ಗ 2017ರಲ್ಲಿ ಶೇ.72.64ರಷ್ಟು ಫಲಿತಾಂಶ ದಾಖಲಿಸಿ 19ನೆಯ ಸ್ಥಾನದಲ್ಲಿತ್ತು. 2018ರಲ್ಲಿ ಶೇ.80.85ರಷ್ಟು ಫಲಿತಾಂಶದೊಂದಿಗೆ 16 ಸ್ಥಾನ, 2019ರಲ್ಲಿ ಶೇ. 87.46ರಷ್ಟು ಫಲಿತಾಂಶದೊಂದಿಗೆ 6ನೆಯ ಸ್ಥಾನ, 2020ರಲ್ಲಿ ಶೇ.90.98ರಷ್ಟು ಫಲಿತಾಂಶದೊಂದಿಗೆ 5ನೆಯ ಸ್ಥಾನ, 2021ರಲ್ಲಿ ಎ ಗ್ರೇಡ್ ಹಾಗೂ 2023ರಲ್ಲಿ ಶೇ.96.8ರಷ್ಟು ಫಲಿತಾಂಶದ ಮೂಲಕ ಪ್ರಥಮ ಸ್ಥಾನವನ್ನು ಗಳಿಸಿದೆ.

ಇನ್ನು, ಈ ಬಾರಿ ಎರಡನೆಯ ಸ್ಥಾನ ಗಳಿಸಿರುವ ಮಂಡ್ಯ ಜಿಲ್ಲೆ, 2017ರಲ್ಲಿ ಶೇ.71.73ರಷ್ಟು ಫಲಿತಾಂಶದೊಂದಿಗೆ 23ನೆಯ ಸ್ಥಾನ, 2018ರಲ್ಲಿ ಶೇ. 71.57ರಷ್ಟು ಫಲಿತಾಂಶದೊಂದಿಗೆ 28ನೆಯ ಸ್ಥಾನ, 2019ರಲ್ಲಿ ಶೇ.85.65ರಷ್ಟು ಫಲಿತಾಂಶದೊಂದಿಗೆ 10ನೆಯ ಸ್ಥಾನ, 2020ರಲ್ಲಿ ಶೇ. 96.61ರಷ್ಟು ಫಲಿತಾಂಶದೊಂದಿಗೆ 11ನೆಯ ಸ್ಥಾನ, 2021ರಲ್ಲಿ ಎ ಗ್ರೇಡ್ ಹಾಗೂ ಈ ಬಾರಿ ಶೇ. 96.74ರಷ್ಟು ಫಲಿತಾಂಶದೊಂದಿಗೆ 2ನೆಯ ಸ್ಥಾನವನ್ನು ಗಳಿಸಿದೆ.

ಹಾಗೆಯೇ, ಈ ಬಾರಿ ರಾಜ್ಯಕ್ಕೇ ಮೂರನೆಯ ಬಾರಿ ಸ್ಥಾನ ಗಳಿಸಿರುವ ಹಾಸನ ಜಿಲ್ಲೆ 2017ರಲ್ಲಿ ಶೇ. 69.58ರಷ್ಟು ಫಲಿತಾಂಶದೊಂದಿಗೆ 31ನೆಯ ಸ್ಥಾನ, 2018ರಲ್ಲಿ ಶೇ. 84.68ರಷ್ಟು ಫಲಿತಾಂಶದೊಂದಿಗೆ 7ನೆಯ ಸ್ಥಾನ, 2019ರಲ್ಲಿ ಶೇ. 89.33ರಷ್ಟು ಫಲಿತಾಂಶದೊಂದಿಗೆ 1ನೆಯ ಸ್ಥಾನ, 2020ರಲ್ಲಿ ಶೇ. 88.61ರಷ್ಟು ಫಲಿತಾಂಶದ ಮೂಲಕ 9ನೆಯ ಸ್ಥಾನ, 2021ರಲ್ಲಿ ಎ ಗ್ರೇಡ್ ಹಾಗೂ ಈ ಬಾರಿ ಶೇ.96.68ರಷ್ಟು ಫಲಿತಾಂಶದೊಂದಿಗೆ 3 ನೆಯ ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದೆ.

ಪ್ರಮುಖವಾಗಿ, ಈ ಮೂರು ಜಿಲ್ಲೆ ಹೊರತುಪಡಿಸಿ ಸಾಮಾನ್ಯವಾಗಿ ಬಯಲುಸೀಮೆ, ಉತ್ತರ ಕರ್ನಾಟದ ಜಿಲ್ಲೆಗಳು ಕೊನೆಯ ಸ್ಥಾನಗಳಲ್ಲಿ ಇರುತ್ತಿತ್ತು. ಆದರೆ, ಉತ್ತಮ ಸ್ಥಾನಗಳನ್ನು ಗಳಿಸಿದೆ.
ಆದರೆ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2016ರಿಂದ ಇಲ್ಲಿಯವರೆಗೂ ಟಾಪ್ 10ರ ಒಳಗೆ ಸ್ಥಾನ ಪಡೆದ ದಾಖಲೆಗಳಿಲ್ಲ. ಇತಿಹಾಸವನ್ನೊಮ್ಮೆ ನೋಡಿದರೆ ಶಿವಮೊಗ್ಗ ಪ್ರಜ್ಞಾವಂತರು, ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ ಎಂದು ಖ್ಯಾತಿ ಪಡೆದಿದೆ. ರಾಷ್ಟ್ರ ಕವಿ ಕುವೆಂಪು, ಹಾ.ಮಾ. ನಾಯಕ್, ನಾ. ಡಿಸೋಜಾ ಅವರಂತಹ ಶ್ರೇಷ್ಠ ಸಾಹಿತಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಜಿಲ್ಲೆ ಎಸ್’ಎಸ್’ಎಲ್’ಸಿ ಫಲಿತಾಂಶದಲ್ಲಿ 29ನೆಯ ಸ್ಥಾನ ಪಡೆದಿರುವುದು ನಿಜಕ್ಕೂ ಆತಂಕದ ವಿಚಾರವೇ ಹೌದು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದ ಫಲಿತಾಂಶ ಕಡಿಮೆಯಾಗಲು ಕಾರಣವೇನು? ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಯಿತೇ? ಶಿಕ್ಷಣ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಸಾಮಾಜಿಕ, ರಾಜಕೀಯ ಬೆಳವಣಿಗೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆಯೇ? ಫಲಿತಾಂಶ ಕಡಿಮೆಯಾಗಿರುವುದರಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವೆಷ್ಟು ಎಂಬೆಲ್ಲಾ ವಿಚಾರಗಳ ಕುರಿತಾಗಿ ಗಂಭೀರವಾಗಿ ಚಿಂತನೆ ನಡೆಸಿ, ಮುಂದಿನ ವರ್ಷದಿಂದ ಇದನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರನ್ನೂ ಸಮನ್ವಯಗೊಳಿಸಿ, ಹಿನ್ನಡೆಗೆ ಕಾರಣ ಕಂಡು ಹಿಡಿದು, ಅದನ್ನು ಸರಿಪಡಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. ಮಾತ್ರವಲ್ಲ ಜಿಲ್ಲೆಗೆ ಈ ವಿಚಾರದಲ್ಲಿ ಅಂಟಿರುವ ಕಳಂಕ ತೊಡೆದು, ಮೊದಲಿನ ಕೀರ್ತಿಯನ್ನು ಎತ್ತಿ ಹಿಡಿಯಬೇಕಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: ChitradurgaHassanKannada News WebsiteLatest News KannadaMandyaShimogaShivamoggaShivamogga NewsSSLC Result 2023ಎಸ್’ಎಸ್’ಎಲ್’ಸಿ ಫಲಿತಾಂಶಶಿವಮೊಗ್ಗ
Share196Tweet123Send
Previous Post

ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ

Next Post

ಮದ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮದ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

ಮದ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

May 8, 2026
ಮಗನಿಗೆ ರಾಜಕೀಯ ಬಳುವಳಿ ನೀಡಲು ಬಿಎಸ್‍ವೈ ಅಭಿಮಾನೋತ್ಸವ ಆಯೋಜನೆ: ಮಧು ಬಂಗಾರಪ್ಪ ವಾಗ್ದಾಳಿ

ಮಗನಿಗೆ ರಾಜಕೀಯ ಬಳುವಳಿ ನೀಡಲು ಬಿಎಸ್‍ವೈ ಅಭಿಮಾನೋತ್ಸವ ಆಯೋಜನೆ: ಮಧು ಬಂಗಾರಪ್ಪ ವಾಗ್ದಾಳಿ

May 8, 2026
ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ ಶಾಖೆ ಶಿವಮೊಗ್ಗದಲ್ಲಿ ಆರಂಭ: ಮುರುಗೇಶ್ ನಿರಾಣಿ

ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ ಶಾಖೆ ಶಿವಮೊಗ್ಗದಲ್ಲಿ ಆರಂಭ: ಮುರುಗೇಶ್ ನಿರಾಣಿ

May 8, 2026
ಮೇ 9-10ರಂದು ಹೊಸಹಳ್ಳಿ ಕೆ.ವೆಂಕಟರಾಮ್ ಅವರಿಗೆ ನಾಗರಿಕ ಸನ್ಮಾನ ಸಮಾರಂಭ

ಮೇ 9-10ರಂದು ಹೊಸಹಳ್ಳಿ ಕೆ.ವೆಂಕಟರಾಮ್ ಅವರಿಗೆ ನಾಗರಿಕ ಸನ್ಮಾನ ಸಮಾರಂಭ

May 8, 2026
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

May 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL