ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಂತ ಬೆಳಿಗ್ಗೆ 11 ಗಂಟೆಯವರೆಗೂ 22.75ರಷ್ಟು ಮತದಾನವಾಗಿದೆ.
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ 11 ಗಂಟೆವರೆಗೂ ಮತದಾನ ಶೇ.17ರಿಂದ 22ರವರೆಗೆ ಮಾತ್ರ ಆಗಿದೆ.
ಶಿವಮೊಗ್ಗದ ಯಾವ ತಾಲೂಕಿನಲ್ಲಿ ಎಷ್ಟು?
ಭದ್ರಾವತಿ – 22.95
ಸಾಗರ – 26.66
ಶಿಕಾರಿಪುರ – 22.1
ಶಿವಮೊಗ್ಗ ನಗರ – 23.62
ಶಿವಮೊಗ್ಗ ಗ್ರಾಮೀಣ – 23.49
ಸೊರಬ – 21.00
ತೀರ್ಥಹಳ್ಳಿ – 20.00
Also read: ಶಿವಮೊಗ್ಗ | ಬೆಳಗ್ಗೆ 7ರಿಂದಲೇ ಮತದಾನ ಆರಂಭ | ಬಿಗಿ ಪೊಲೀಸ್ ಬಂದೋಬಸ್ತ್ | ಅಧಿಕಾರಿಗಳ ಅಮಾನತು ಕಾರಣವೇನು?
ಚುನಾವಣಾ ಆಯೋಗದ ಮಾಹಿತಿಯಂತೆ ಬೆಳಿಗ್ಗೆ 11ಗಂಟೆ ವೇಳೆಗೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಶೇಕಡಾವಾರು ಮತದಾನವಾಗಿದ್ದರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅತಿಕಡಿಮೆ ಮತದಾನ ನಡೆದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















