ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಮುಂದುವರಿದ ಸಂಗೀತ ಕಾರ್ಯಕ್ರಮವು ಮೇ 15ರಿಂದ 23ರವರೆಗೆ ಪ್ರತಿದಿನ ಸಂಜೆ 5:30ರಿಂದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 15ರ ಸಂಜೆ 5:30ಕ್ಕೆ ಮಂಗಳಾ ಅಶೋಕ್ರಿಂದ ವೀಣಾವಾದನ, 7:30ಕ್ಕೆ ಬೆಂಗಳೂರಿನ ಉಡುಪಿ ಅಭಿಜ್ಞಾರಾವ್ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಮೇ 16ರಂದು ಸಂಜೆ 5:30ಕ್ಕೆ ಸಾಕೇತ್ ಶಾಸ್ತ್ರಿ ಮತ್ತು ವೃದದವರಿಂದ ಹಿಂದೂಸ್ತಾನಿ ಗಾಯನ, 6:30ಕ್ಕೆ ಸಿದ್ಧಾರ್ಥ್ ಬೆಳ್ಮಣ್ಣುರಿಂದ ಹಿಂದೂಸ್ತಾನಿ ಗಾಯನ, ಮೇ 17ರಂದು ಸಂಜೆ 5:30ಕ್ಕೆ ಅದಿತಿ ಎಂ.ಎಸ್. ಮತ್ತೂರು ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ರಮ್ಯಾ ಸಾರಿಕಾ(ಯುಎಸ್ಎ) ಹಾಡುಗಾರಿಕೆ ನಡೆಯಲಿದೆ ಎಂದರು.
Also read: ಜೆಡಿಎಸ್, ಕಾಂಗ್ರೆಸ್ ನಡುವಿನ ಒಳ ಒಪ್ಪಂದದಿಂದ ತನಗೆ ಸೋಲು: ಅಶೋಕ್ ನಾಯ್ಕ್
ಮೇ 18ರ ಸಂಜೆ 5:30ಕ್ಕೆ ಟಿ.ವಿ. ಶಿಲ್ಪಾ ಮತ್ತ ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ತ್ರಿಚ್ಯೂರ್ ಸಹೋದರರಾದ ಶ್ರೀಕೃಷ್ಣ ಮೋಹನ್ ಹಾಗೂ ರಾಮ್ಕುಮಾರ್ ಮೋಹನ್ರಿಂದ ಯುಗಳ ಹಾಡುಗಾರಿಕೆ. 19ರ ಸಂಜೆ 5::30ಕ್ಕೆ ಬೆಂಗಳೂರಿನ ನಯನ ಕಾರಂತ್ ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ಹೊಸಳ್ಳಿಯ ರಾಜೇಶ್ವರಿ ನಾಗೇಂದ್ರ ಪ್ರಕಾಶ್ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಮೇ 20ರ ಸಂಜೆ 6 ಗಂಟೆಗೆ ಶ್ರೀ ಪರಮಹಂಸ ಸದಾಶಿವ ಬ್ರಹ್ಮೇಂದ್ರರ ರಚನೆ `ಅದ್ವೈತ ಸದಾಶಿವ’ವನ್ನು ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಮೇ 21ರ ಸಂಜೆ 5:30ಕ್ಕೆ ಮಹತಿ ಭಟ್ ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ಮೈಸೂರಿನ ಆರ್.ಕೆ. ಪದ್ಮನಾಭ ಇವರಿಂದ ವೀಣಾ ವಾದನ ನಡೆಯಲಿದೆ ಎಂದರು.
ಮೇ 22ರ ಸಂಜೆ 5:30ಕ್ಕೆ ಬೆಂಗಳೂರಿನ ಚಿನ್ಮಯಿ ನಾಗೇಂದ್ರ ಮತ್ತು ಮಹತಿ ನಾಗೇಂದ್ರ ಮತ್ತು ವೃಂದದವರಿಂದ ಯುಗಳ ಹಾಡುಗಾರಿಕೆ 6:30ಕ್ಕೆ ಬೆಂಗಳೂರಿನ ಸಾಧ್ವಿನಿರಿಂದ ಹಾಡುಗಾರಿಕೆ. ಮೇ 23ರ ಸಂಜೆ 5:30ಕ್ಕೆ ಭವಾನಿ ಕಲ್ಕೂರು ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ಚೆನ್ನೈನ ಶ್ರುತಿ ಎಸ್. ಭಟ್ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಸಂಘದ ಅಧ್ಯಕ್ಷ ಶಂಕರನಾರಾಯಣ ಶಾಸ್ತ್ರಿ ಮಾತನಾಡಿ, ಪ್ರತಿ ವರ್ಷವೂ ಸಂಘದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದು, ಹೆಚ್ಚಾಗಿ ಶಾಸ್ತ್ರೀಯ ಸಂಗೀತಕ್ಕೆ ಒತ್ತು ನೀಡುತ್ತಿದ್ದೇವೆ. 25ನೇ ವರ್ಷದ ಅಂಗವಾಗಿ ಸುಮಾರು 30 ಕಾರ್ಯಕ್ರಮ, 50ನೇ ವರ್ಷದ ಅಂಗವಾಗಿ 60 ಕಾರ್ಯಕ್ರಮ, ಈಗ 75ನೇ ವರ್ಷದ ಅಂಗವಾಗಿ ಈಗಾಗಲೇ 72 ಕಾರ್ಯಕ್ರಮವನ್ನು ನಡೆಸಲಾಗಿದೆ. ಖ್ಯಾತ ಹಾಡುಗಾರರನ್ನು ಕರೆಯಿಸಿ ಕಾರ್ಯಕ್ರಮವನ್ನು ನಡೆಸಿದ್ದೇವೆ ಎಂದ ಅವರು, ಕಾರ್ಯಕ್ರಮಕ್ಕೆ ಸಂಗೀತಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಕಿಶೋರ್ ಶಿರ್ನಾಳಿ, ಶ್ರೀನಿವಾಸ, ಮೋಹನ ಶಾಸ್ತ್ರಿ, ಗೋಪಾಲ, ಆನಂದ, ಶ್ರೀರಾಮ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post