ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕುವೆಂಪು ರಸ್ತೆಯ ಸಾಯಿ ಆರ್ಕೆಡ್‌ನಲ್ಲಿರುವ ರಾಯಲ್ ಆರ್ಚ್ ಫ್ಯಾಮಿಲಿ ಸಲೂನ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ನಿನ್ನೆ ಪೊಲೀಸರು ದಾಳಿ ಮಾಡಿ ಆರು ಯುವತಿಯರನ್ನು ರಕ್ಷಿಸಿದ್ದಾರೆ.
ಸ್ಪಾದ ಮಾಲೀಕರಾದ ವಿದ್ಯಾಶ್ರೀ ಮತ್ತು ಈಕೆಯ ಪತಿ ಗೋಪಾಲ್ ಇವರು ಬೇರೆ ಬೇರೆ ಕಡೆಯಿಂದ ಯುವತಿಯರನ್ನು ಕರಸಿಕೊಂಡು ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಎಎಸ್‌ಪಿ ಅನಿಲ್‌ಕುಮಾರ್ ಭೂಮಾ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎನ್. ಸುರೇಶ್ ನೇತೃತ್ವದಲ್ಲಿ ದಾಳಿ ಮಾಡಿದ ಮಹಿಳಾ ಠಾಣೆ ಎಸ್‌ಐ ಕುಮಾರ್ ಮತ್ತು ಸಿಬ್ಬಂದಿ ತಂಡ ಆರು ಯುವತಿಯರನ್ನು ರಕ್ಷಿಸಿ, ವಿದ್ಯಾಶ್ರೀ ಹಾಗೂ ಆಕೆಯ ಪತಿ ಗೋಪಾಲ್‌ನನ್ನು ಬಂಧಿಸಿದ್ದಾರೆ.
ಆರೋಪಿತರ ವಿರುದ್ಧ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















