ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಣಾದ ಯೋಗ ರಿಸರ್ಚ್ ಫೌಂಡೇಷನ್ ಶಿವಮೊಗ್ಗ ಮತ್ತು ಸರ್ಜಿ ಫೌಂಡೇಷನ್ ಆಶ್ರಯದಲ್ಲಿ ಜೂನ್ 21 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ 21 ದಿನಗಳು- 21 ಆಸನಗಳು ಎಂಬ ಶೀರ್ಷಿಕೆಯಡಿಯಲ್ಲಿ ಜೂನ್ 1 ರ ಗುರುವಾರದಿಂದ 21 ದಿನಗಳ ಕಾಲ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಯೋಗಾಸಕ್ತ ಪುರುಷರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಭಾಗವಹಿಸಬಹುದು. ಬೆಳಿಗ್ಗೆ 6 ರಿಂದ 7:15 ಗಂಟೆಯವರೆಗೆ ನಡೆಯುವ ಯೋಗಾಭ್ಯಾಸ ತರಗತಿಗೆ ಯೋಗಾಸಕ್ತರು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ದುರ್ಗಿಗುಡಿ, ರಾಘವೇಂದ್ರ ಸ್ವಾಮಿ ಮಠದ ಬಳಿ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 3 ನೇ ಮಹಡಿಯಲ್ಲಿ ಏರ್ಪಡಿಸಲಾಗಿದೆ.












Discussion about this post