ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಪ್ರಮುಖ ಮತ್ತು ದೊಡ್ಡ ಆ್ಯಪಲ್ ಚಿಲ್ಲರೆ ಮಾರಾಟಗಾರ ಇಮ್ಯಾಜೀನ್ ಸಂಸ್ಥೆ ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್‌ನಲ್ಲಿ ಅದ್ಧೂರಿಯ ವಿನೂತನ ಹೊಸ ಮಳಿಗೆಯನ್ನು ಅರಂಭಿಸುತ್ತಿದೆ.
ಸುಮಾರು 2500 ಚದರ ಅಡಿಯ ಈ ಅದ್ಧೂರಿ ಮಳಿಗೆಯಲ್ಲಿ ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಶ್ರೇಣಿ ಮತ್ತು ಪ್ರದರ್ಶನದಲ್ಲಿರುವ ಬಿಡಿಭಾಗಗಳ ಬೃಹತ್ ಶ್ರೇಣಿಯ ಜೊತೆಗೆ ಅಂಗಡಿಯಲ್ಲಿನ ದುರಸ್ತಿಯಂತಹ ಸೇವೆಗಳನ್ನು ಒದಗಿಸಲಿದೆ. ವಿಪರ್ಯಾಸವೆಂದರೆ, 2004 ರಲ್ಲಿ ಆಪಲ್ ಉತ್ಪನ್ನಗಳಿಗಾಗಿ ಭಾರತದ ಮೊದಲ ವಿಶೇಷ ಪ್ರೀಮಿಯಂ ಮರುಮಾರಾಟಗಾರರ ಅಂಗಡಿಯನ್ನು ಇಮ್ಯಾಜೀನ್ ಇದೇ ಸ್ಥಳದಲ್ಲಿ ತೆರೆದಿತ್ತು.

Also read: ವಿಐಎಸ್’ಎಲ್ ವಿಚಾರದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ನಿಯೋಗ: ಸಿಎಂ ಹೇಳಿದ್ದೇನು? ಏನೆಲ್ಲಾ ಮಾತುಕತೆ ನಡೆಯಿತು?
ಅ್ಯಂಪಲ್‌ನ (ಇಮ್ಯಾಜಿನ್‌ನ ಮೂಲ ಕಂಪನಿ) ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ನಾರಂಗ್ ಅವರು ತಮ್ಮ ಹೃತ್ಪೂರ್ವಕ ಭಾವನೆಗಳನ್ನು ವ್ಯಕ್ತಪಡಿಸುತ್ತಾ, “ನಾವು ಗ್ರಾಹಕರಿಗೆ ನಗುಮೊಗದಿಂದ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತಾ ಮತ್ತು ಅವರಿಗೆ ಹೆಚ್ಚು ಉತ್ತಮವಾಗಿ ಬದುಕಲು ಸಹಾಯ ಮಾಡಲು, ಸರಿಯಾದ ಆ್ಯಪಲ್ ಉತ್ಪನ್ನಗಳನ್ನು ಆಯ್ಕೆ ಮಾಡಲು ಅವರಿಗೆ ಸಹಾಯ ಮಾಡುತ್ತೇವೆ. ಸಂತೃಪ್ತಗೊಂಡ ಗ್ರಾಹಕರ ಸಂತೋಷ ಮತ್ತು ಸಂಭ್ರಮದ ಮುಂದೆ ಬೇರೆ ಯಾವುದೇ ಸಾಟಿಯಿಲ್ಲ. ಈ ಐತಿಹಾಸಿಕ ಸ್ಥಳದಲ್ಲಿನ ನಮ್ಮ ಹೊಸ ಮಳಿಗೆಯು, ನಾವು ಮತ್ತಷ್ಟು ಮುಂದುವರೆದು, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಮೂಲಕ ಮಂತ್ರಮುಗ್ಧರನ್ನಾಗಿಸಲು ಸಹಾಯ ಮಾಡಲಿದೆ.”
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post