ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮಲ್ಲಿ ಮತ್ಸರಕ್ಕಿಂತ ಮುತ್ಸದ್ದಿತನದ ಅವಶ್ಯಕತೆಯಿದ್ದು ಅಂತಹ ಸಮಾಜಮುಖಿ ಸ್ಪಂದನೆಯೇ ಬಹು ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಜ್ಯುಯೇಷನ್ ಡೇ – 2023 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಾವು ದೊಡ್ಡವರಾಗಿ ಬೆಳೆದಂತೆಲ್ಲ ಈ ಸಮಾಜಕ್ಕೆ ಸಲ್ಲಿಸಬೇಕಾದ ಋಣಭಾರವು ಹೆಚ್ಚುತ್ತಾ ಹೋಗುತ್ತದೆ. ವಯಸ್ಸು ಹೆಚ್ಚಾದಂತೆಲ್ಲ ಮನುಷ್ಯ ದುರ್ಬಲನಾಗುತ್ತಾ ಹೋಗುತ್ತಾನೆ. ಅದೇ ಒಂದು ಸಂಸ್ಥೆಯ ವಯಸ್ಸು ಹೆಚ್ಚುತ್ತಾ ಹೋದಂತೆಲ್ಲಾ ಅದರ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ. ಜ್ಞಾನದ ಸದ್ಬಳಕೆ ಸಮಾಜದ ಬೆಳವಣಿಗೆಗೆ ಬಳಕೆಯಾಗಲಿ. ಇಂದು ಆತಂಕದ ವಾತಾವರಣದಲ್ಲಿ ನಾವಿದ್ದೇವೆ. ಸತ್ಯ ಚಪ್ಪಲ್ಲಿಯನ್ನು ಮೆಟ್ಟಿಕೊಳ್ಳುವುದರ ಒಳಗೆ ಸುಳ್ಳು ಜಗತ್ತನ್ನು ಎರಡು ಸುತ್ತು ಹಾಕಿರುವಂತಹ ಉದಾಹರಣೆಗಳ ನಡುವೆ ಬದುಕುತ್ತಿದ್ದೇವೆ ಎಂದರು.
Also read: ಬಾಡಿಗೆದಾರರಿಗೂ ಗೃಹ ಜ್ಯೋತಿ ಅನ್ವಯಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಕಣ್ಣಿರಿಗಿಂತ ಬೆವರ ಹನಿಯೇ ಶ್ರೇಷ್ಠ. ಕಣ್ಣೀರು ಕೃತಕವಾಗಿ ಮೂಡಬಹುದು ಅದರೇ ಬೆವರ ಹನಿ ಕಷ್ಟ ಪಟ್ಟಾಗ ಮಾತ್ರ ಬರುತ್ತದೆ. ಡಾಂಭಿಕತೆಯ ಹೊರತಾಗಿ ಶ್ರಮಿಕ ವರ್ಗದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳಿ ಎಂದರು.
ಎನ್ಇಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ವೃತ್ತಿಪರ ನೈತಿಕತೆಯನ್ನು ಅನುಸರಿಸಿ. ನಾವು ವೃತ್ತಿಪರತೆಯನ್ನು ಎತ್ತಿ ಹಿಡಿದಂತೆಲ್ಲ ವೃತ್ತಿಯ ಕೌಶಲ್ಯತೆ ನಮ್ಮನ್ನು ಸದಾ ರಕ್ಷಿಸುತ್ತದೆ ಎಂದು ಹೇಳಿದರು.
ಎನ್ಇಎಸ್ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಹೆಚ್.ಸಿ. ಶಿವಕುಮಾರ್, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಎಂಜಿನಿಯರಿಂಗ್ ಎಂಬಿಎ ಎಂಸಿಎ ವಿಭಾಗಗಳ ಸುಮಾರು 900 ಕ್ಕು ಹೆಚ್ಚು ವಿದ್ಯಾರ್ಥಿಗಳು ಪದವೀಧರ ಪ್ರತಿಜ್ಞಾ ವಿಧಿ ಪಡೆದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















