Tuesday, July 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

‘ವಿಶ್ವ ರಕ್ತದಾನಿಗಳ ದಿನ’ ನಾವೇಕೆ ಈ ದಿನವನ್ನು ಈ ವಿಶೇಷ ದಿನವನ್ನಾಗಿ ಆಚರಿಸುತ್ತಿದ್ದೇವೆ?

June 14, 2023
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ನಾಗರಾಜ ಶೆಟ್ಟರ್  |

ಪ್ರಪಂಚದಲ್ಲಿ ಯಾರಿಗಾದರೂ ನಾವು ನೀಡಬಹುದಾದ ಅಮೂಲ್ಯ ಕೊಡುಗೆಯೆಂದರೆ ರಕ್ತದಾನ ಎಂಬುದು ಈಗಾಗಲೇ ಸಾಬೀತಾಗಿದೆ. ಈ ರಕ್ತದ #Blood ಮಹತ್ವವನ್ನು ಅದು ಹೊಂದಿರುವ ವಿಶೇಷ ಗುಣಗಳ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ರಕ್ತದಾನ #BloodDonation ಮಾಡುವಾಗ ಯಾವ ರಕ್ತದ ಗುಂಪಿನವರು ಯಾವ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಬಹುದು ಎಂಬುದನ್ನು ತನ್ನ ಪ್ರಯೋಗಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಈ ವಿಂಗಡಣೆಯ ಸೂತ್ರಧಾರನೇ ಇಂದು ನಾವು ಆಚರಿಸುತ್ತಿರುವ ವಿಶೇಷ ದಿನದ ಕಾರಣಕರ್ತ. ಈ ಮಹಾನ್ ವ್ಯಕ್ತಿಯ ಬಗ್ಗೆ ಅರಿಯದೇ ಈ ದಿನದ ಆಚರಣೆ ಮಾಡಿದರೆ ಅದರ ಮಹತ್ವ ಕಡಿಮೆಯಾಗಬಹುದು. ಅದಕ್ಕಾಗಿ ಈ ವಿಶೇಷ ಲೇಖನ.

1901ರ ಸಮಯದಲ್ಲಿ ಕಾರ್ಲ್ ಲ್ಯಾಂಡೈನರ್ ಒಬ್ಬ ಆಸ್ಟ್ರಿಯನ್ #Austrian ಮೂಲದ ಅಮೇರಿಕನ್ ಜೀವಶಾಸ್ತ್ರಜ್ಞ, ವೈದ್ಯ ಮತ್ತು ರೋಗನಿರೋಧಕ ಶಾಸ್ತçಜ್ಞ ಮಾಡಿದ ಆವಿಷ್ಕಾರ ಇಂದು ಅವನನ್ನು ಪ್ರತಿ ಕ್ಷಣ, ಪ್ರತಿ ನಿಮಿಷ ನೆನಪಿಸಿಕೊಂಡು ಈ ‘ವಿಶ್ವ ರಕ್ತದಾನಿಗಳ ದಿನ’ #WorldBloodDonorDay ಆಚರಣೆಗೆ ಸ್ಪೂರ್ತಿಯಾಗಿದ್ದಾನೆ. ಜೀವಜಗತ್ತಿನ ಪ್ರತಿ ಜೀವಿಗೂ ಬದುಕಲು ಅತಿ ಅಗತ್ಯವೆನಿಸಿದ ರಕ್ತದ ಗುಂಪುಗಳನ್ನು ವಿಂಗಡಿಸಿ ಜಗತ್ತಿಗೆ ತಿಳಿಸಿದ ನಿತ್ಯಸ್ಮರಣೀಯ ವಿಜ್ಞಾನಿ. ಈ ಮಹಾನ್ ವ್ಯಕ್ತಿಯ ಜನ್ಮದಿನವನ್ನು ನಾವು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಿದ್ದೇವೆ.
ಲ್ಯಾಂಡೈನರ್ #CarlLandiner ವಿಜ್ಞಾನಿಯು ರಕ್ತವನ್ನು ನಾಲ್ಕು ಗುಂಪುಗಳಾಗಿ ಎ, ಬಿ, ಎಬಿ ಮತ್ತು ಓ ಎಂದು ವರ್ಗೀಕರಿಸಿ ರಕ್ತದ ವಿಶೇಷ ಗುಣಗಳನ್ನು ಜಗತ್ತಿಗೆ ಪರಿಚಯಿಸಿದರು. 1901 ರಲ್ಲಿ ಕೆಲವು ರಕ್ತದ ವರ್ಗಾವಣೆಗಳ ಪ್ರಯೋಗಗಳನ್ನು ಮಾಡಿ ಅದರಲ್ಲಿ ಯಶಸ್ಸನ್ನು ಕಂಡರು. ಹಾಗೂ ಮತ್ತೆ ಕೆಲವು ಪ್ರಯೋಗಗಳು ಮಾರಕವಾಗಿದ್ದನ್ನೂ ಸಹ ತಮ್ಮದೇ ಸಿಬ್ಬಂದಿಯ ಕೆಂಪು ರಕ್ತಕಣಗಳು ಹಾಗೂ ಸಿರಮ್ ಮಿಶ್ರಣ ಮಾಡುವ ಪ್ರಯೋಗದ ಮೂಲಕ ದೃಢಪಡಿಸಿದರು. ಸುದೀರ್ಘ ಅಧ್ಯಯನದ ನಂತರ ಎ ಬಿ ಓ (ABO) ವ್ಯವಸ್ಥೆಯ ರಕ್ತದ ಗುಂಪುಗಳ ಆವಿಷ್ಕಾರದ ಕುರಿತು ಒಂದು ಪ್ರಬಂಧವನ್ನು ಪ್ರಕಟಿಸುತ್ತಾರೆ. ಅವರ ಈ ಅಮೂಲ್ಯವಾದ ಆವಿಷ್ಕಾರದಿಂದಾಗಿ 1930 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆಯುತ್ತಾರೆ.

ABO ವ್ಯವಸ್ಥೆಯಲ್ಲಿನ 4 ವಿಭಿನ್ನ ರಕ್ತದ ಗುಂಪುಗಳು ಎ, ಬಿ, ಎಬಿ ಮತ್ತು ಓ ಎಂದು ನಾವೀಗ ಅರಿತಿದ್ದೇವೆ. ಪ್ರತಿಯೊಂದು ವ್ಯಕ್ತಿಯ ರಕ್ತದ ಗುಂಪು ಎರಡು ಜೀನ್ ಗಳ ಒಂದು ಜೋಡಿಯಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಲ್ಯಾಂಡೈನರ್ ಪ್ರಯೋಗಗಳಿಂದ ದೃಢಪಡಿಸಿದರು. ಪ್ರತಿ ಪೋಷಕರಿಂದ ಆನುವಂಶಿಕವಾಗಿ ಪಡೆದ ಒಂದೊಂದು ಜೀನ್ ಸೇರಿ ಈ ಜೀನ್ ಜೋಡಿ ನಿರ್ಧರಿಸಲ್ಪಡುತ್ತದೆ. ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ ಅಣುಗಳಿಂದ ಗುರುತಿಸಲ್ಪಡುತ್ತದೆ. ಇವುಗಳನ್ನು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿರುವ ಪ್ರತಿಜನಕಗಳು ಅಥವಾ ಆ್ಯಂಟಿಜೆನ್ಸ್ ಎಂದು ಕರೆಯಲಾಗುತ್ತದೆ.
ರಕ್ತದಾನದ ಇತಿಹಾಸವು ಪ್ರಾಚೀನತೆಗೆ ನಮ್ಮನ್ನು ಕರೆದೊಯ್ಯುತ್ತದೆ. ಇತಿಹಾಸದ ಪುಟಗಳಲ್ಲಿ ಇಂಗ್ಲಿಷ್ ವೈದ್ಯರಾದ ರಿಚರ್ಡ್ ಲೋರ್ವ ಎಂಬುವರು ರಕ್ತ ವರ್ಗಾವಣೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಕಾರ್ಯಚಟುವಟಿಕೆಯ ಅಧ್ಯಯನದ ಕೆಲಸಕ್ಕಾಗಿ ಹೆಚ್ಚು ಸ್ಮರಣೀಯರು ಎನಿಸುತ್ತಾರೆ. ಈ ಅಧ್ಯಯನವನ್ನು ಅವರು ‘ಟ್ರಾಕ್ಟಟಸ್ ಡಿ ಕಾರ್ಡೆ’ ಎಂಬ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಅವರು ಪ್ರಾಣಿಗಳಲ್ಲಿ ರಕ್ತದಾನದ ವಿಜ್ಞಾನವನ್ನು ಪರೀಕ್ಷಿಸಿದ ಮೊಟ್ಟ ಮೊದಲಿಗರಾಗಿದ್ದರು ಮತ್ತು ಅವರು ಎರಡು ಶ್ವಾನಗಳ ನಡುವೆ ಯಾವುದೇ ಗಮನಾರ್ಹ ದುಷ್ಪರಿಣಾಮಗಳಿಲ್ಲದೆ ರಕ್ತವನ್ನು ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ವಿಶ್ವ ಆರೋಗ್ಯ ಸಂಸ್ಥೆಯು(WHO) #WHO 2004ರಲ್ಲಿ ಕಾರ್ಲ್ ಲ್ಯಾಂಡೈನರ್ ರವರ ಜನ್ಮದಿನವಾದ ಜೂನ್ 14 ನೇ ದಿನವನ್ನು ‘ವಿಶ್ವ ರಕ್ತದಾನಿಗಳ ದಿನ’ ವನ್ನಾಗಿ ಆಚರಿಸುವ ನಿರ್ಧಾರ ಕೈಗೊಂಡು 2005 ರಲ್ಲಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸುವ ಅಧಿಕೃತ ಘೋಷಣೆ ಹೊರಡಿಸುತ್ತದೆ. ಅಂದಿನಿಂದ ಇಂದಿನವರೆಗೂ ಈ ವಿಶೇಷ ದಿನದಂದು ವಿಶ್ವದಾದ್ಯಂತ ನಡೆಯುವ ರಕ್ತದಾನ ಶಿಬಿರಗಳ ಮೂಲಕ ಕೋಟ್ಯಂತರ ಯೂನಿಟ್ ರಕ್ತ ಸಂಗ್ರಹವಾಗಿ ಕೋಟ್ಯಂತರ ಜೀವಗಳು ಮರುಜನ್ಮ ಕಾಣಲು ಕಾರಣವಾಗಿದೆ.
ರಕ್ತದಾನದ ಮಹತ್ವವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಶೇಷವಾಗಿ ಯುವಜನತೆಗೆ ತಿಳಿಸಬೇಕಿರುವ ಅಗತ್ಯತೆ ಕಂಡು ಬರುತ್ತದೆ. ನಿಯಮಿತ ರಕ್ತದಾನವು ಮನುಷ್ಯನನ್ನು ಆರೋಗ್ಯದಿಂದಿರಲು ಹೆಚ್ಚು ಸಹಕಾರಿಯಾಗಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ಮನುಷ್ಯನು ರಕ್ತದಾನ ಮಾಡಬಹುದಾಗಿದೆ. ಮಹಿಳೆಯರಲ್ಲಿ ರಕ್ತದಾನದ ಕುರಿತು ಇದ್ದ ವಿರೋಧಾಭಾಸವು ಕಡಿಮೆಯಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ರಕ್ತದಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಮಹಿಳೆಯರಲ್ಲಿ ಸಹಜವಾಗಿ ರಕ್ತದಾನದ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿ ರಕ್ತದಾನಕ್ಕೆ ಇದ್ದ ತೊಡಕುಗಳನ್ನು ನಿವಾರಿಸುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಯಂ ಆರೋಗ್ಯದಿಂದ ಆರೋಗ್ಯವಂತ ಕುಟುಂಬ ಸಾಧ್ಯ, ಅದೇರೀತಿ ಆರೋಗ್ಯವಂತ ಕುಟುಂಬದಿಂದ ಆರೋಗ್ಯವಂತ ಸಮಾಜ, ಆರೋಗ್ಯವಂತ ದೇಶ ಸಾಧ್ಯ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ಸಾಧ್ಯ ಎಂಬ ಘೋಷವಾಕ್ಯದಡಿ ರಕ್ತದಾನ ಮಹಾದಾನ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂಬ ಮಾತುಗಳಿಗೆ ಸಾಕ್ಷಿಯಾಗುವತ್ತ ನಮ್ಮ ಚಿತ್ತವನ್ನು ಬೆಳೆಸಿಕೊಳ್ಳುವ ಅಗತ್ಯತೆ ಇಂದು ನಮ್ಮೆದುರಿಗೆ ಇದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005-1.mp4

Kalahamsa Infotech private limited

Tags: 6 to 6 Kannada MovieAustrianBlood DonationBlood Donation DayCarl LandinerLatest News Kannadaಕಾರ್ಲ್ ಲ್ಯಾಂಡೈನರ್ನಾಗರಾಜ ಶೆಟ್ಟರ್ರಕ್ತದಾನವಿಶ್ವ ರಕ್ತದಾನಿಗಳ ದಿನ
Previous Post

ಆರೋಗ್ಯವಂತ ಯುವಜನತೆ ರಕ್ತದಾನ ಮಾಡಬೇಕು: ಜಿಲ್ಲಾಧಿಕಾರಿ ಡಾ. ಸೆಲ್ವಮಣಿ

Next Post

ರಂಗಪ್ರವೇಶಕ್ಕೆ ಅಣಿಯಾದ ಅನನ್ಯಾ ಅಂಬರೀಶ್ | 18ರಂದು ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಂಗಪ್ರವೇಶಕ್ಕೆ ಅಣಿಯಾದ ಅನನ್ಯಾ ಅಂಬರೀಶ್ | 18ರಂದು ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ ಈ ಗಾಂಧಾರಿ ಮೆಣಸು ..!

July 29, 2025

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

July 29, 2025

ಕಾಡಾನೆ ದಾಳಿ | ಅಪಾರ ಬೆಳೆ ನಾಶ | ರೈತ ಕಂಗಾಲು

July 29, 2025

ಗುರುರಾಯರ ಆರಾಧನಾ ಮಹೋತ್ಸವ | ಆಗಸ್ಟ್ 1ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

July 29, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ ಈ ಗಾಂಧಾರಿ ಮೆಣಸು ..!

July 29, 2025

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

July 29, 2025

ಕಾಡಾನೆ ದಾಳಿ | ಅಪಾರ ಬೆಳೆ ನಾಶ | ರೈತ ಕಂಗಾಲು

July 29, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!