ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬನಶಂಕರಿ ಮೂರನೆಯ ಹಂತದ ಜನತಾ ಬಜಾರ್’ನಲ್ಲಿರುವ ಪಾದಚಾರಿ ಮಾರ್ಗದ ಅವಸ್ಥೆಯಿಂದಾಗಿ ಜನರು ಓಡಾಡುವುದು ದುಸ್ಥರವಾಗಿದ್ದು, ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಜನತಾ ಬಜಾರ್’ನಲ್ಲಿ ಪಾದಚಾರಿಗಳ ಮಾರ್ಗದ ಮೇಲೆ ದ್ವಿಚಕ್ರ ವಾಹನಗಳು ಓಡಾಡುವ ಚಾಳಿ ಬೆಳೆದಿದ್ದು, ಬೈಕ್ ಸವಾರರ ವಿರುದ್ಧ ಈಗಾಗಲೇ ಹಲವರು ಪ್ರತಿಭಟನೆ ನಡೆಸಿದ್ದಾರೆ.

ಇದು ಬನಶಂಕರಿ 3 ನೇ ಹಂತದ ಜನತಾ ಬಜಾರ್’ನಿಂದ ಹಿಡಿದು ಮೈಸೂರು ರಸ್ತೆ ಕಡೆ ಹೋಗುವ ದಾರಿಯಲ್ಲಿ ಇರುವ ಫುಟ್ಪಾತ್

ಇದು ಮಾತ್ರವಲ್ಲದೇ, ಸಾವಿರಾರು ರೂಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಪುಟ್ ಪಾತ್ ಇಂದು ಅಕ್ಷರಶಃ ಕಸದ ರಾಶಿ ರಾಶಿ ಹಾಕುವ ತಾಣ ಹಾಗೂ ದ್ವಿಚಕ್ರ ವಾಹನ ನಿಲ್ಲಿಸುವ ತಾಣ! ಮರಳು-ಜಲ್ಲಿ ಪುಡಿ ಹಾಕುವ ತಾಣವಾಗಿ ಪರಿವರ್ತಿತವಾಗಿದೆ.
ಅಲ್ಲದೇ, ಬನಶಂಕರಿ 3 ನೆಯ ಹಂತದ ಜನತಾ ಬಜಾರ್ ಅಯೋಧ್ಯಾ ಉಪಾಚಾರ್ ಹೋಟೆಲ್ ನಿಂದ ಹಿಡಿದು ಮೈಸೂರು ರಸ್ತೆ ಕಡೆ ಸಾಗುವ ರಸ್ತೆ ಉದ್ದಕ್ಕೂ ಸಿಗುವ ಪುಟ್ ಪಾತ್ ಸಮಸ್ಯೆಯ ಚಿತ್ರಣವಾಗಿದೆ.

Also read: ಎಲ್ಲಿ ಶ್ರದ್ಧೆ ಇದೆಯೋ ಅಲ್ಲಿ ಗುರು ಕಾರುಣ್ಯ: ಶ್ರೀ ರಾಘವೇಶ್ವರ ಭಾರತೀ ತೀರ್ಥರ ಅಭಿಪ್ರಾಯ

ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಅವರೇ ಇತ್ತ ನೋಡಿ ನಿಮ್ಮ ಕ್ಷೇತ್ರದ ಪಾದಚಾರಿ ಮಾರ್ಗದ ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಅಲ್ಲದೇ, ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಬಿಬಿಎಂಪಿಯವರು ಇತ್ತ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಸಂಬಂಧ ಪಟ್ಟವರು ಪುಟ್ ಪಾತ್ ಮೇಲೆ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಲಿ. ಪುಟ್ ಪಾತ್ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಪಾದಾಚಾರಿ ಮಾರ್ಗಗಳು ಪಾದಾಚಾರಿ ಗಳು ಓಡಾಡಲು ಅನುವು ಮಾಡಿಕೊಡಲಿ.
(ಚಿತ್ರ-ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ )










Discussion about this post