ಕಲ್ಪ ಮೀಡಿಯಾ ಹೌಸ್ | ಸಾಗರ |
ಎಲೆಚುಕ್ಕೆ ರೋಗ, ಹಳದಿ ರೋಗ, ಕೊಳೆ, ಬೇರು ಹುಳು ಮುಂತಾದವುಗಳಿಂದಾಗಿ ರೈತರು ಅಡಿಕೆ ಮಾತ್ರ ನಂಬಿ ಈ ಕಾಲದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದ್ದು, ತೋಟದಲ್ಲಿ ಉಪಬೆಳೆಯಾದ ಕಾಫಿ, ಜಾಯಿಕಾಯಿ, ಕಾಳುಮೆಣಸು, ಬಾಳೆ, ಹೈನುಗಾರಿಕೆ, ಜೇನು ಸಾಕಾಣಿಕೆ ಕೃಷಿ ಉದ್ಯೂಗ ಮಾಡಿ ಆರ್ಥಿಕ ಸ್ವಾವಲಂಬನೆಯಿಂದ ಸಮೃದ್ಧ ಜೀವನ ನಡೆಸಲು ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್. ಮಹಾಬಲೇಶ್ವರ ಅವರು ಕರೆ ನೀಡಿದರು.
ರೋಟರಿ ಕ್ಲಬ್ ಸಾಗರ ಮತ್ತು ಸಹ್ಯಾದ್ರಿ ಫಾರ್ಮರ್ಸ್ ವಾಟ್ಸಪ್ ಗುಂಪು ಸಂಯುಕ್ತವಾಗಿ ಆಯೋಜಿಸಿದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಡಿಕೆ ಕೃಷಿ ಒಂದು ಉದ್ಯಮವಾಗಿದೆ. ಘಟ್ಟ ಪ್ರದೇಶಗಳಲ್ಲಿ ಬೆಳೆಯುವಂತಹ ಅಡಿಕೆ ಈಗ ಬಯಲು ಸೀಮೆಗೆ ವ್ಯಾಪಿಸಿ, ಗುಜರಾತ್, ತೆಲಂಗಾಣ ರಾಜ್ಯದಲ್ಲು ವಿಸ್ತರಣೆಯಾಗಿ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಒಂದು ದಿನ ಸಂಕಷ್ಟ ಎದುರಿಸುತ್ತಾರೆ. ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಬಡ ಮತ್ತು ಮಧ್ಯಮ ಬೆಳೆಗಾರರಾಗಿದ್ದು ಅವರ ಜೀವನ ಇದರಿಂದಲೇ ನಡೆಯಬೇಕಾಗಿದೆ. ಅಡಿಕೆ ದರ ಕುಸಿತ ಕಂಡರೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಇದೀಗ ಮುಂಗಾರು ಆರಂಭವಾಗಿದ್ದು ಪರ್ಯಾಯ ಬೆಳೆಯತ್ತಲೂ ಗಮನಹರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
Also read: ವಿದೇಶ ಪ್ರವಾಸದಿಂದ ಮರಳಿದ ಮೋದಿ ಬಿಜೆಪಿ ಮುಖಂಡರಿಗೆ ಮೊದಲು ಕೇಳಿದ ಪ್ರಶ್ನೆಯೇನು?
ಹೊಸದಾಗಿ ಅಡಿಕೆ ವಿಸ್ತರಣೆ ಮಾಡುತ್ತಿರುವವರು ಶ್ರೀಮಂತರು, ಬಹುಕೋಟಿ ಒಡೆಯರು, ಸಾವಿರಾರು ಎಕರೆ ಭೂ ಹಿಡುವಳಿದಾರರು. ಅಡಿಕೆ ಬೇಸಾಯದಲ್ಲಿ ಯಾಂತ್ರಿಕತೆ ಬರಬೇಕಾಗಿದೆ. ಈಗಾಗಲೇ ಫೈಬರ್ ದೋಟಿ, ಔಷಧ ಸಿಂಪಡಿಸುವ ಯಂತ್ರ, ಕಳೆ ನಿವಾರಣಗೆ ಮಲ್ಚಿಂಗ್ ಹೊದಿಕೆ, ಡ್ರೈಯ್ಯರ್, ಭೂಗತ ಕಾಲುವೆ, ಎನ್‍ಆರ್‍ಈಜಿಯಲ್ಲಿ ಮಣ್ಣು ಹಾಕುವುದನ್ನು ಮಾಡಬಹುದಾಗಿದೆ ಎಂದರು.
ಉತ್ತರಕನ್ನಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಮತ್ತು ಘನಾಶಿನ ಸಾಂಬಾರು ಬೆಳೆಗಾರರ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಎಸ್.ಆರ್. ಹೆಗಡೆ, ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಕೃಷಿ ಉದ್ಯಮ, ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.
ಸಹ್ಯಾದ್ರಿ ವಾಟ್ಸಪ್ ಗುಂಪಿನ ಸಂಚಾಲಕರಾದ ಕೆ. ವೆಂಕಟೇಶ ಕವಲಕೋಡು ಗುಂಪು ನಡೆದುಬಂದ ದಾರಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ರೋ. ರಾಜನಂದಿನಿ ಅವರು ರೋಟರಿಯ ಮುಂದಿನ ಸಾಲಿನ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಆದಿತ್ಯ ಹೆಗಡೆ ಬಣ್ಣೂಮನೆ ವಹಿಸಿದ್ದರು. ಮೊದಲು ರೋ. ಹೆಚ್.ಎಂ. ಶಿವಕುಮಾರ ಸ್ವಗತಿಸಿ, ಕಾರ್ಯದರ್ಶಿ ರೋ. ಜಗದೀಶ್ ಟಿ.ವಿ.ಎಸ್. ವಂದಿಸಿದರು. ರೈತರು, ಸಹ್ಯಾದ್ರಿ ವಾಟ್ಸಪ್ ಗುಂಪಿನ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















