ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಮೆರಿಕಾ ಹಾಗೂ ಈಜಿಫ್ಟ್ ದೇಶಗಳ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಇಂದು ನಸುಕಿನ ವೇಳೆ ನವದೆಹಲಿಯಲ್ಲಿ ವಿಮಾನದಿಂದ ಇಳಿಯುತ್ತಲೇ ಬಿಜೆಪಿ ಮುಖಂಡರಿಗೆ ಪ್ರಶ್ನೆಗಳು ಸುರಿಮಳೆ ಸುರಿಸಿದ್ದಾರೆ.
PM Modi lands in Delhi after concluding maiden state visits to US, Egypt
Read @ANI Story | https://t.co/1gVv9cN2KG#PMModi #StateVisits #Egypt #US #JPNadda pic.twitter.com/Ixpf5DNejg
— ANI Digital (@ani_digital) June 25, 2023
ಹೌದು… ಇಡಿಯ ವಿಶ್ವದ ಪ್ರಮುಖ ರಾಷ್ಟçಗಳು ಅಚ್ಚರಿಯಿಂದ ನೋಡಿದ ಪ್ರವಾಸವನ್ನು ಮುಗಿಸಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ಬಿಜೆಪಿ ನಾಯಕರು ಗುಲಾಬಿ ನೀಡಿ ಸ್ವಾಗತಿಸಿದರು.

Also read: ಶೃಂಗೇರಿ ಬಳಿ ಲಾರಿಗೆ ಡಿಕ್ಕಿಯಾಗಿ ಪಲ್ಪಿಯಾದ ಬಸ್: ಅದೃಷ್ಟವಷಾತ್ ಪ್ರಯಾಣಿಕರು ಪಾರು
ಈ ಕುರಿತಂತೆ ಬಿಜೆಪಿ ಸಂಸದ ಮನೋಜ್ ತಿವಾರಿ ರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಧಾನಿಯವರು ವಿಮಾನದಲ್ಲಿ ಕೆಳಗಿಳಿಯುತ್ತಿದ್ದಂತೆ ನಮ್ಮನ್ನು ಕೇಳಿದ ಮಾತು ನಾವೆಲ್ಲಾ ಹೇಗೆ ಕೆಲಸ ಮಾಡುತ್ತಿದ್ದೇವೆ ಮತ್ತು ದೇಶದಲ್ಲಿ ಏನಾಗುತ್ತಿದೆ. ಸರ್ಕಾರದ ರಿಪೋರ್ಟ್ ಕಾರ್ಡು ಜನರನ್ನು ತಲುಪುತ್ತಿದೆಯೇ? ಅಲ್ಲದೆ ಜೆ.ಪಿ. ನಡ್ಡಾ ಅವರ ತೆಲಂಗಾಣ ಭೇಟಿಯ ಬಗ್ಗೆ ಸಹ ಪ್ರಧಾನ ಮಂತ್ರಿಗಳು ಕೇಳಿ ತಿಳಿದುಕೊಂಡರು ಎಂದಿದ್ದಾರೆ.

ವಿಶ್ರಾಂತಿಯಲ್ಲದೇ ಸರಣಿ ಸಭೆ
ಇನ್ನು, ವಿದೇಶ ಪ್ರವಾಸ ಮುಗಿಸಿಕೊಂಡು ಇಂದು ನಸುಕಿನ ವೇಳೆ ದೆಹಲಿಗೆ ಆಗಮಿಸಿದ ಪ್ರಧಾನಿಯವರು ಇಂದು ವಿಶ್ರಾಂತಿ ಪಡೆಯದೇ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.












Discussion about this post