ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ 90.8 ಎಫ್ಎಂ ಸಮುದಾಯ ಬಾನುಲಿಯಲ್ಲಿ ಜೂನ್ 29ರ ನಾಳೆ ಬೆಳಗ್ಗೆ 10 ಗಂಟೆಯಿಂದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ MLA SN Channabasappa (ಚೆನ್ನಿ) ಅವರೊಂದಿಗೆ ನೇರ ಸಂವಾದ, ಫೋನ್ ಇನ್ ಕಾರ್ಯಕ್ರಮ ಇರುತ್ತದೆ.
ಬೆಳಗ್ಗೆ 10:30ರಿಂದ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಲಿದ್ದು, ಕಾರ್ಯಕ್ರಮದ ಅವಧಿಯಲ್ಲಿ ರೇಡಿಯೋ ಶಿವಮೊಗ್ಗದ ಸ್ಟುಡಿಯೋ ಸಂಖ್ಯೆ 96860 96279 ಗೆ ಕರೆ ಮಾಡಬಹುದಾಗಿದೆ. ನಿಮ್ಮ ಅಹವಾಲು, ಸಲಹೆಗಳಿಗೆ ಮುಕ್ತ ಸ್ವಾಗತವಿರುತ್ತದೆ.
ರೇಡಿಯೋ ಶಿವಮೊಗ್ಗ ಮೊಬೈಲ್ ಆಪ್ ನಲ್ಲಿ ಕೂಡಾ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಕೇಳಬಹುದಾಗಿದೆ. ಆಪ್ ನಲ್ಲಿ 24 ಗಂಟೆಯ ಪ್ರಸಾರವಿದೆ.
Also read: ನೆಟ್ಟಾರು ಹತ್ಯೆ ಆರೋಪಿಗಳ ಶರಣಾಗತಿಗೆ ಎನ್’ಐಎ ಕೋರ್ಟ್ ಜೂನ್ 30ರ ಡೆಡ್ ಲೈನ್
ಚನ್ನಬಸಪ್ಪನವರು ಶಾಸಕರಾದ ನಂತರದ ಪ್ರಥಮ ಬಾನುಲಿ ಲೈವ್ ಫೋನ್ ಇನ್ ಇದಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳುಗರು ಕರೆ ಮಾಡಿ, ಭಾಗವಹಿಸಿಬೇಕೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post