ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ 2ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್ ಸಾಧನೆಗೆ ಪಾತ್ರನಾಗಿದ್ದು, ಕುಟುಂಬ ವರ್ಗದಲ್ಲಿ ಸಂತಸ ಮನೆ ಮಾಡಿದೆ.
7 ವರ್ಷ 3 ತಿಂಗಳು ವಯಸ್ಸಿನ ಸಿ. ವೀರ್‌ನಾರಾಯಣ್‌ಸಿಂಗ್ ಕೇವಲ 14 ಸೆಕೆಂಡ್‌ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನು ಹೇಳುವ ಮೂಲಕ ಬೆರಗುಗೊಳಿಸಿದ್ದಾನೆ. ಈ ಮೂಲಕ ಓಎಂಜಿ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದಾನೆ.
ಬಾಲಕನ ಬುದ್ದಿಮತ್ತೆ, ಕ್ರಿಯಾಶೀಲತೆಗೆ ಓಎಂಜಿ ಪ್ರಶಂಸೆ ವ್ಯಕ್ತಪಡಿಸಿದೆ. ಈ ಸಾಧನೆ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದು, ಇದೀಗ ಪೋಷಕರಿಗೆ ಸಾಧನೆಯ ಪ್ರಮಾಣಪತ್ರ ಹಾಗು ಪದಕ ಬಂದು ತಲುಪಿದೆ.ಸಿ. ವೀರ್‌ನಾರಾಯಣ್‌ಸಿಂಗ್ ತಾಲೂಕಿನ ದೇವರನರಸೀಪುರ ಗ್ರಾಮದ ನಿವಾಸಿಗಳಾದ ಸಿ. ಚರಣ್‌ಸಿಂಗ್ ಮತ್ತು ಆರ್. ದಿವ್ಯರಾಣಿ ದಂಪತಿ ಪುತ್ರನಾಗಿದ್ದಾನೆ. ಬಾಲಕನ ಸಾಧನೆಗೆ ಕುಟುಂಬ ವರ್ಗದವರು, ಗ್ರಾಮಸ್ಥರು, ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Also read: ನಗೆ ಹಬ್ಬವಾಗಿ ಬೆಳ್ಳಿತೆರೆ ಮೇಲೆ ಬರಲಿದೆ ಕಿರಿಕ್ ‘et’ 11
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post