ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್‌ವುಡ್ |
ಕಿರಿಕ್ ‘et’ 11 Kirik et 11 ಚಿತ್ರ ಒಂದು ನಗೆ ಹಬ್ಬವಾಗಿ ತಯಾರಾಗಲಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ.
ನವೀನ್ ಶಂಕರ್ ಮತ್ತು ದಾನಿಶ್ ಸೇಯ್ತ್ ನಟನೆಯ ಈ ಚಿತ್ರವನ್ನು ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ , ಸುಮನ್ ಕುಮಾರ್ ಅವರು ನಿರ್ದೇಶಿಸಲಿದ್ದಾರೆ.
ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿರುವ The Family Man ಮತ್ತು Farziಯ ಕಥೆಯನ್ನು ಹೆಣೆದಿದ್ದಾರೆ.
ಈ ಚಿತ್ರಕ್ಕೆ ಸಂಗೀತವನ್ನು ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರು ನೀಡಲಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ , ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸಲಿದ್ದಾರೆ.
Also read: E Sewa Kendras – Bridging the digital divide & ensuring justice for All
ಕೆ ಆರ್ ಜಿ ಸ್ಟುಡಿಯೋಸಿನ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4 ನೇ ಚಿತ್ರ ನಿರ್ಮಾಣವಾಗಲಿದೆ. ಕಿರಿಕ್ et 11 ಚಿತ್ರದ ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post