ಕಲ್ಪ ಮೀಡಿಯಾ ಹೌಸ್ | ಶೃಂಗೇರಿ |
ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠದ ಉಭಯ ಜಗದ್ಗುರುಗಳು ಜುಲೈ 3ರಿಂದ ತಮ್ಮ ಚಾತುರ್ಮಾಸ್ಯ ವ್ರತವನ್ನು ಆರಂಭಿಸಲಿದ್ದಾರೆ.
ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಗಳು, ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರೊಂದಿಗೆ ತಮ್ಮ 49ನೆಯ ಚಾರ್ತುಮಾಸ್ಯ ವ್ರತವನ್ನು ಜುಲೈ 3ರಿಂದ ಶ್ರೀಮಠದಲ್ಲಿ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 29ರಂದು ಭಾದ್ರಪದ ಪೌರ್ಣಮಿಯಂದು ವ್ರತ ಸಂಪನ್ನಗೊಳ್ಳಲಿದೆ.

Also read: ಟ್ವಿಟರ್ ಸಂಸ್ಥೆಗೆ 50ಲಕ್ಷ ರೂ. ದಂಡ: ಹೈಕೋರ್ಟ್ ಆದೇಶ
ಉಭಯ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ, ಜಗನ್ಮಾತೆ ಶ್ರೀಶಾರದಾಂಬೆ, ಶ್ರೀಶಂಕಚಾರ್ಯರ ಹಾಗೂ ಉಭಯ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್ ಕೋರಿದ್ದಾರೆ.










Discussion about this post