ಕಲ್ಪ ಮೀಡಿಯಾ ಹೌಸ್ | ಹಾವೇರಿ/ಶಿವಮೊಗ್ಗ |
ಲೋಕಸಭಾ ಚುನಾವಣೆಗೆ #ParliamentElection2024 ಇನ್ನು ಬಹಳಷ್ಟು ತಿಂಗಳು ಕಾಲವಕಾಶವಿದ್ದರೂ ಸಹ ಹಾವೇರಿ-ಗದಗ #Haveri ಕ್ಷೇತ್ರದಲ್ಲಿ ಈಗಾಗಲೇ ಇದರ ಚಟುವಟಿಕೆಗಳು ತೆರೆಮರೆಯಲ್ಲಿ ಆರಂಭವಾಗಿದ್ದು, ರಾಜ್ಯದ ಗಮನ ಸೆಳೆಯುತ್ತಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ರಾಜಕೀಯಕ್ಕೆ ಸ್ವಯಂ ಪ್ರೇರಿತರಾಗಿ ನಿವೃತ್ತಿ ಘೋಷಣೆ ಮಾಡಿ ರಾಷ್ಟ್ರದ ಗಮನ ಸೆಳೆದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರ ಪುತ್ರ ಕೆ.ಈ. ಕಾಂತೇಶ್ #KEKanteesh ಅವರಿಗೆ ಶಿವಮೊಗ್ಗದಿಂದ ಟಿಕೇಟ್ ದೊರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಅಂದು ಟಿಕೇಟ್ ಕೈತಪ್ಪಿದ ನಂತರ ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಕಾಂತೇಶ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿದೆ.

ಹಾವೇರಿ ಕ್ಷೇತ್ರ ಏಕೆ?
ಹಾವೇರಿ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ #ShivakumarUdasi ಈಗಾಗಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಪ್ರಬಲ ನಾಯಕನ ಅವಶ್ಯಕತೆಯಿದೆ.

ಯಾವ ಜಾತಿ ಮತದಾರರು ಅಂದಾಜು ಎಷ್ಟಿದ್ದಾರೆ?
- ಲಿಂಗಾಯತರು: 5.5 ಲಕ್ಷ
- ಕುರುಬ: 2.10 ಲಕ್ಷ
- ಎಸ್’ಸಿ/ಎಸ್’ಟಿ: 3 ಲಕ್ಷ
- ಮುಸ್ಲಿಂ: 2.4 ಲಕ್ಷ
- ಬ್ರಾಹ್ಮಣರು: 45 ಸಾವಿರ
- ಗಂಗಾಮತಸ್ಥರು: 49 ಸಾವಿರ
- ಮರಾಠ: 42 ಸಾವಿರ
- ಉಳಿದವರು: 60 ಸಾವಿರ

ಅತ್ಯಂತ ಪ್ರಮುಖವಾಗಿ ತಮ್ಮದೇ ಸಮುದಾಯ ಕಾಗಿನೆಲೆ ಪೀಠ ಇರುವ ಹಾಗೂ ಕುರುಬ #Kuruba ಸಮುದಾಯದ 2.10 ಲಕ್ಷಕ್ಕೂ ಅಧಿಕ ಜನರು ಹಾವೇರಿಯಲ್ಲಿರುವ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಈಶ್ವರಪ್ಪ ಹಾಗೂ ಅವರ ಕುಟುಂಬಸ್ಥರು ಕ್ಷೇತ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಈಗ ಮಾತ್ರವಲ್ಲದೇ ಮೊದಲಿನಿಂದಲೂ ಹಾವೇರಿ ಹಾಗೂ ಕಾಗಿನೆಲೆಯೊಂದಿಗೆ ಬೆಸುಗೆ ಹೊಂದಿರುವ ಈಶ್ವರಪ್ಪ ಹಾಗೂ ಕಾಂತೇಶ್ ಅವರಿಗೆ ಸ್ಥಳೀಯರ ಬೆಂಬಲ ಬಹಳಷ್ಟಿದೆ.
ಲಿಂಗಾಯತ ಸಮುದಾಯದ ಮತದಾರರು ಸುಮಾರು 5.5 ಲಕ್ಷ ಮಂದಿಯಿರುವ ಕಾರಣ ಬಿಜೆಪಿಗೆ #BJP ಬೆಂಬಲ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಸಾಧ್ಯತೆ ಹೆಚ್ಚು. ಇದರೊಂದಿಗೆ ಕಾಂತೇಶ್ ಅವರ ಕುರುಬ ಮತದಾರರು ಸುಮಾರು 2.10 ಲಕ್ಷ ಮಂದಿ ಇರುವುದರಿಂದ ಸಮುದಾಯದ ಭಾಗಷಃ ಬೆಂಬಲ ದೊರೆಯುವುದು ನಿಶ್ಚಿತ. ಅಲ್ಲದೇ, ಶಿವಮೊಗ್ಗ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಬ್ರಾಹ್ಮಣ, ಮರಾಠ, ಜೈನ, ಗಂಗಾಮತಸ್ಥ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಈಶ್ವರಪ್ಪ ಕುಟುಂಬಸ್ಥರು ಬೆಂಬಲ ಹೊಂದಿದ್ದಾರೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಮಾತ್ರವಲ್ಲೇ ಇಡಿಯ ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರಬಲ ನಾಯಕರಾಗಿ ಬೆಳೆದು, ಕಳೆದ ಚುನಾವಣೆಯ ವೇಳೆ ಚುನಾವಣಾ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ ಅವರ ಪ್ರಬುದ್ಧ ನಿರ್ಧಾರ ಇಡಿಯ ದೇಶಕ್ಕೇ ಮಾದರಿಯಾಗಿದೆ. ಈ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿ, ಪಕ್ಷ ನಿಮ್ಮ ಕುಟುಂಬದ ಜೊತೆಯಲ್ಲಿರುತ್ತದೆ ಎಂದು ಭರವಸೆ ನೀಡಿದ್ದರು.
ಈಶ್ವರಪ್ಪನವರ ತ್ಯಾಗವನ್ನು ಪರಿಗಣಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರ ಪುತ್ರನಿಗೆ ಟಿಕೇಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿಯೇ ಹಾವೇರಿಯಲ್ಲಿ ಕಾಂತೇಶ್ ಸಕ್ರಿಯರಾಗಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಬಲ್ಲ ಮೂಲಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post