ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಇಂದು ಮುಂಜಾನೆ ಆರಂಭಿಸಿದ್ದು, ಭಾರತದ ಮಟ್ಟಿಗೆ ಈ ಭೇಟಿ ಮಹತ್ವದ್ದಾಗಿದೆ.
Leaving for Paris, where I will take part in the Bastille Day celebrations. I look forward to productive discussions with President @EmmanuelMacron and other French dignitaries.
Other programmes include interacting with the Indian community and top CEOs. https://t.co/jwT0CtRZyB— Narendra Modi (@narendramodi) July 13, 2023
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರ ಆಹ್ವಾನ ಮೇರೆಗೆ ಇಂದು ಅಲ್ಲಿಗೆ ಪ್ರಯಾಣ ಬೆಳೆಸಿದ ಪ್ರಧಾನಿಯವರು ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಮೋದಿಯವರು ಫ್ರಾನ್ಸ್ ವಾರ್ಷಿಕ ಬಾಸ್ಟಿಲ್ ಡೇ ಪರೇಡ್’ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದು, ಇದರಲ್ಲಿ 269 ಸದಸ್ಯರನ್ನೊಳಗೊಂಡ ಭಾರತೀಯ ಸೇನೆಯ ಮೂರೂ ಸೇವೆಗಳ ತುಕಡಿ ಭಾಗವಹಿಸಲಿವೆ. ಫ್ರೆಂಚ್ ಜೆಟ್’ಗಳೊಂದಿಗೆ ಭಾರತೀಯ ವಾಯುಪಡೆಯ ಮೂರು ರಫೇಲ್ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ.
Also read: ಗಂಡನ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ: ಸಿಟ್ಟಿಗೆ ಕಾರಣ ಆ ಎರಡು ಟೊಮೇಟೋ!
ಭಾರತದ ಮಟ್ಟಿಗೆ ಮಹತ್ವದ ಭೇಟಿ
ಭಾರತದ ಮಟ್ಟಿಗೆ ಪ್ರಧಾನಿ ಮೋದಿಯವರ ಈ ಪ್ರವಾಸ ಮಹತ್ವದ್ದಾಗಿದೆ. ಭಾರತ ಮತ್ತು ಫ್ರಾನ್ಸ್ ಮಧ್ಯೆ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತಾಗಿ ಮಹತ್ವದ ಚರ್ಚೆ ನಡೆಯಲಿದೆ.
ಪ್ರಧಾನಿ ಟ್ವೀಟ್ ಮಾಡಿದ್ದೇನು?
ಇನ್ನು ಪ್ರವಾಸ ಆರಂಭಿಸುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಿಯವರು, ಪ್ಯಾರಿಸ್’ಗೆ ಹೊರಡುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರ ಫ್ರೆಂಚ್ ಗಣ್ಯರೊಂದಿಗೆ ಹಲವು ಫಲಪ್ರದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತೀಯ ಸಮುದಾಯವನ್ನು ಭೇಟಿ ಮಾಡುವುದು, ಉನ್ನತ ಸಿಇಒಗಳೊಂದಿಗೆ ಸಂವಾದವನ್ನು ನನ್ನ ಪ್ರವಾಸದಲ್ಲಿ ಒಳಗೊಂಡಿವೆ ಎಂದಿದ್ದಾರೆ.
ಜುಲೈ 15ರಂದು ಯುಎಇ ಭೇಟಿ
ಇನ್ನು, ಪ್ರಧಾನಿ ಮೋದಿಯವರು ಜುಲೈ 15ರಂದು ಯುಎಇಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಧಾನಿಯವರು ಮಾತುಕತೆ ನಡೆಸಲಿದ್ದು, ಈ ಭೇಟಿ, ಮಾತುಕತೆಯಿಂದ ಭಾರತಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post