ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ತಿರುಪತಿ |
ಎಷ್ಟೇ ಎತ್ತರಕ್ಕೆ ಏರಿದರೂ ಸರಳತೆಯ ಸಾಕಾರಮೂರ್ತಿಗಳಾಗಿ ಆದರ್ಶಪ್ರಾಯವಾಗಿರುವ ಇನ್ಫೋಸಿಸ್ ನಾರಾಯಣ ಮೂರ್ತಿ Infosys Narayanamurthi ಹಾಗೂ ಸುಧಾಮೂರ್ತಿ Sudha Murthy ದಂಪತಿ ತಿರುಪತಿ ತಿಮ್ಮಪ್ಪನಿಗೆ Thirupathi Thimmappa ಚಿನ್ನದ ಶಂಖವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ನಾರಾಯಣ ಮೂರ್ತಿ-ಸುಧಾಮೂರ್ತಿ ಅವರ ದಾಂಪತ್ಯಕ್ಕೆ 45 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ ಈ ವಿಶೇಷ ಕಾಣಿಕೆ ಅರ್ಪಿಸಿದ್ದಾರೆ.
ಈ ದಂಪತಿಗಳು 40 ವರ್ಷಗಳಿಂದ ತಮ್ಮಲ್ಲಿ ಹೊಂದಿದ್ದ ಆಭರಣವನ್ನು ಬಳಸಿ ಚಿನ್ನದ ಶಂಖವನ್ನು ಸಿದ್ದಗೊಳಿಸಿದ್ದಾರೆ. ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದ ದಂಪತಿಗಳು, ಆನಂತರ ಶಂಖವನ್ನು ಕಾಣಿಕೆಯಾಗಿ ಅರ್ಪಿಸಿ, ದೇವಾಲಯಕ್ಕೆ ಹಸ್ತಾಂತರಿಸಿದ್ದಾರೆ.
Also read: ಕಾಡಂಚಿನ ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆ ಸಾವು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post