ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ದಾವಣಗೆರೆಯಲ್ಲೂ ಸಹ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು CCB Police ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಂತೆ ವರದಿಯಾಗಿದ್ದು, ಇಲ್ಲಿನ ಆಜಾದ್ ನಗರದ ಅರಳೀಮರ ವೃತ್ತದ ಬಳಿಯ ಮನೆಯಿಂದ ಫಯಾಜ್ ವುಲ್ಲಾ(30) ಎಂಬಾತನನ್ನು ಬೆಂಗಳೂರಿನಿAದ ಬಂದಿದ್ದ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Also read: ಬೆಂಗಳೂರಿನಲ್ಲಿ ಯಾವುದಾಗಿತ್ತು ಬಂಧಿತ ಶಂಕಿತ ಉಗ್ರರ ಟಾರ್ಗೆಟ್? ಆತಂಕಕಾರಿ ಮಾಹಿತಿ
ಬಂಧಿತ ವ್ಯಕ್ತಿ ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ಈಗಾಗಲೇ ಈತನ ವಿರುದ್ಧ ಡ್ರಗ್ಸ್ ಮಾರಾಟ, ಅಕ್ರಮ ಆಯುಧಗಳ ಮಾರಾಟ ಸೇರಿದಂತೆ ಸುಮಾರು ಏಳು ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾನೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post