ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ರಾಜ್ಯ ಹಾಗೂ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರತಿಷ್ಠಿತ ಪಿಇಎಸ್’ಐಟಿಎಂ ವಿದ್ಯಾಸಂಸ್ಥೆಗೆ PESITM Institution ನ್ಯಾಕ್ ಸಂಸ್ಥೆಯಿಂದ `A’ ಗ್ರೇಡ್ ಮಾನ್ಯತೆ ನೀಡಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್(ಯುಜಿಸಿ)ನ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಷನ್ ಕೌನ್ಸಿಲ್(ನ್ಯಾಕ್) ಈ ಮೊದಲು ಪಿಇಎಸ್’ಐಟಿಎಂ ವಿದ್ಯಾಸಂಸ್ಥೆಗೆ ಶ್ರೇಷ್ಠ ಗುಣಮಟ್ಟವನ್ನು ಪರಿಶೀಲಿಸಿ B++ ಮಾನ್ಯತೆ ನೀಡಿತ್ತು.
ಆದರೆ, ಈ ಮಾನ್ಯತೆಯನ್ನು ವಿದ್ಯಾಸಂಸ್ಥೆ ಪ್ರಶ್ನಿಸಿತ್ತು. ಆನಂತರ ಮತ್ತೆ ನಡೆದ ಗುಣಮಟ್ಟ ಪರಿಶೀಲನಾ ಪ್ರಕ್ರಿಯೆಯಲ್ಲಿ ಜಯ ಸಾಧಿಸಿ `A` ಗ್ರೇಡ್ ಮಾನ್ಯತೆ ಪಡೆಯುವಲ್ಲಿ ಸಫಲವಾಗಿದೆ.
Also read: ಡಿಸಿಸಿ ಬ್ಯಾಂಕ್ ನಿರ್ದೇಶಕರ ಅವಿಶ್ವಾಸ ನಿರ್ಣಯ: ಪ್ರಭಾರ ಅಧ್ಯಕ್ಷರಾಗಿ ಹೆಚ್.ಎಲ್. ಷಡಕ್ಷರಿ ಆಯ್ಕೆ
ಪಿಇಎಸ್’ಐಟಿಎಂ ಶಿಕ್ಷಣ ಸಂಸ್ಥೆಗೆ ನೀಡಿರುವ `ಎ’ ಗ್ರೇಡ್ ಮಾನ್ಯತೆಯಿಂದ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಉನ್ನತವಾಗಲಿದೆ. ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯುವಲ್ಲಿ ಪೂರಕವಾಗುವ ಪರಿಸರವನ್ನು ನಿರ್ಮಿಸುವಲ್ಲಿ ಮತ್ತು ವಿದ್ಯಾರ್ಥಿ ಸಮೂಹದ ಜ್ಞಾನಾರ್ಜನೆ, ಪ್ರಾಯೋಗಿಕ ಕೌಶಲ್ಯಗಳನ್ನು ಆಮೂಲಾಗ್ರವಾಗಿ ವೃದ್ಧಿಸುವಲ್ಲಿ ಈ ಮಾನ್ಯತೆ ಸಹಕಾರಿಯಾಗಲಿದೆ.
ಇನ್ನು, ಈ ಮಾನ್ಯತೆಯು ಪಿಇಎಸ್ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ಇರುವ ಅದ್ವಿತೀಯ ಬೋಧನಾ ಹಾಗೂ ಕಲಿಕಾ ಗುಣಮಟ್ಟ, ಸಂಶೋಧನಾ ಕ್ಷೇತ್ರದಲ್ಲಿ ಜರುಗುತ್ತಿರುವ ಪ್ರಯತ್ನಗಳ ಪ್ರಸ್ತುತತೆಯನ್ನು ಗುರುತಿಸುವಲ್ಲಿ ಹಾಗೂ ತನ್ಮೂಲಕ ವಿದ್ಯಾರ್ಥಿ ಸಮೂಹವು ಅಸಾಧಾರಣ ಸಂಶೋಧನೆಗಳನ್ನು ಕೊಡುಗೆಗಳಾಗಿ ನೀಡಿ ಮಾನವ ಸಮಾಜದ ಏಳ್ಗೆಗೆ ಶ್ರಮಿಸುವಲ್ಲಿ ಭದ್ರಬುನಾದಿಯನ್ನು ಸೃಷ್ಟಿಸಲಿದೆ. ಪ್ರತಿಷ್ಠಿತ ಕಂಪನಿಗಳಲ್ಲಿ ನೇಮಕಾತಿಗಳ ಸಂಖ್ಯೆ ಹೆಚ್ಚುವಲ್ಲಿ ನ್ಯಾಕ್ ನೀಡಿರುವ ಈ ಮಾನ್ಯತೆಯು ಒಂದು ಭದ್ರಅಡಿಪಾಯವಾಗಿ ರೂಪಿತವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಕಾರ್ಯದಲ್ಲಿ ಸರ್ವತೋಮುಖ ಸಹಕಾರವನ್ನು ನೀಡಿದ ವಿದ್ಯಾಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಎಲ್ಲರನ್ನು ಆಡಳಿತ ಮಂಡಳಿ, ಪ್ರಾಚಾರ್ಯ ಡಾ. ಎಂ.ವಿ. ಚೈತನ್ಯ ಕುಮಾರ್ ಹಾಗೂ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್. ನಾಗರಾಜ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ಮಲೆನಾಡಿನ ಹೆಮ್ಮೆ ಪಿಇಎಸ್ ಶಿಕ್ಷಣ ಸಂಸ್ಥೆ
ಮೌಲ್ಯಾಧಾರಿತ ಶಿಕ್ಷಣವನ್ನು ಮಾನವ ಸಮಾಜದ ಎಲ್ಲಾ ಸ್ತರಗಳ ಜನರಿಗೆ ತಲುಪಿಸುವಲ್ಲಿ ಹಾಗೂ ಈ ಮೂಲಕ ಜೀವನಮಟ್ಟವನ್ನು ಸುಧಾರಿಸುವಲ್ಲಿ ಅನುಕೂಲಕರವಾಗುವಂತೆ ಡಾ.ಎಂ.ಆರ್. ದೊರೈಸ್ವಾಮಿ ಮತ್ತು ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಇವರುಗಳ ಸಾಂಘಿಕ ಪ್ರಯತ್ನದ ಫಲಶ್ರುತಿಯಾಗಿ ಶಿವಮೊಗ್ಗ ನಗರದಲ್ಲಿ 2006ರಲ್ಲಿ ಪ್ರೇರಣಾ ಶೈಕ್ಷಣಿಕ ಮತ್ತು ಸಾಮಾಜಿಕ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ ಅಡಿಯಲ್ಲಿ ಮಲೆನಾಡು ಭಾಗದ ವಿದ್ಯಾರ್ಥಿ ಸಮೂಹವು ತಾಂತ್ರಿಕ ಶಿಕ್ಷಣವನ್ನು ಪಡೆಯುವ ಸದವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ 2007ನೆಯ ಇಸವಿಯಲ್ಲಿ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಎಂಬ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಶಿವಮೊಗ್ಗ ನಗರದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕರ್ನಾಟಕ ರಾಜ್ಯದ ಮಲೆನಾಡು ವಿಭಾಗದ ವಿದ್ಯಾರ್ಥಿ ಸಮೂಹಕ್ಕೆ ಅತ್ಯುತ್ತಮ ಮಟ್ಟದಲ್ಲಿ ತಾಂತ್ರಿಕ ಶಿಕ್ಷವನ್ನು ನೀಡುವ ಸದುದ್ದೇಶದಿಂದ ಸ್ಥಾಪಿತವಾದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಇನ್ಫರ್ಮೇಷನ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಸಿವಿಲ್‌ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮಷೀನ್ ಲರ್ನಿಂಗ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, (ಡೇಟಾಸೈನ್ಸ್); ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ಹಾಗೂ ಕಂಪ್ಯೂಟರ್ ಇಂಜಿನಿಯರಿಂಗ್ ವಿವಿಧ ಇಂಜಿನಿಯರಿಂಗ್ ಕೋರ್ಸ್’ಗಳ ಜೊತೆಜೊತೆಗೆ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇನ್, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಎಂಬ ಪಿಜಿ ಕೋರ್ಸ್ ಸಹ ಉಪಲಬ್ಧವಿದೆ.
ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ಪೂರಕವಾಗಿ ಅತ್ಯವಶ್ಯವಿರುವ ಕಲಾಕೌಶಲ್ಯತೆ ಹಾಗೂ ತಾಂತ್ರಿಕ ಚಾಕಚಕ್ಯತೆಗಳನ್ನು ಮೂಡಿಸಿ ವೃದ್ಧಿಸುವಲ್ಲಿ ತನ್ನದೇ ಆದ ವಿನೂತನ ಮಾದರಿಗಳನ್ನು ಪ್ರಾಯೋಗಿಕ ವಾಗಿ ಪ್ರಚುರಪಡಿಸುವಲ್ಲಿ ಪಿಇಎಸ್’ಐಟಿಎಂ ಸದಾ ಕಾಲ ಶ್ರಮಿಸುತ್ತಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















