ಕಲ್ಪ ಮೀಡಿಯಾ ಹೌಸ್ | ತುಮಕೂರು |
ನಗರದಲ್ಲಿ ಗುರುವಾರ ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು. ಅದು ರೈಲಿನ ಬರ್ತ್ ಡೇ #Birthday ಸಾಮಾನ್ಯವಾಗಿ ಎಲ್ಲೂ ನಡೆಯದ ರೈಲಿನ ಹುಟ್ಟುಹಬ್ಬವನ್ನು ನಗರದ ತುಮಕೂರು #Tumkur ಬೆಂಗಳೂರು #Bengaluru ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ ಹತ್ತು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.
ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ಬೆಳಗ್ಗೆ 8 ಕ್ಕೆ ತುಮಕೂರಿನಿಂದ ಬೆಂಗಳೂರಿಗೆ 2013ರ ಆಗಸ್ಟ್ 3 ರಂದು ಹೊಸ ರೈಲಿನ #Train ಸಂಚಾರವನ್ನು ಆರಂಭಿಸಲಾಗಿತ್ತು. ಅಂದಿನಿಂದ ಪ್ರತಿವರ್ಷವೂ ರೈಲ್ವೇ ಪ್ರಯಾಣಿಕರ ವೇದಿಕೆ ಆಶ್ರಯದಲ್ಲಿ ರೈಲಿನ ಜನ್ಮದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗುರುವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು. ಬಲೂನ್, ಬಂಟಿಂಗ್ಸ್’ಗಳನ್ನೂ ಕಟ್ಟಿ ಖುಷಿಪಟ್ಟರು.
ರೈಲಿನ ಪೈಲಟ್ #LocoPilot ಸುಬ್ರಹ್ಮಣ್ಯಂ ಹಾಗೂ ಗಾರ್ಡ್ ಎಂ.ಆರ್.ಎಂ. ನಾಯ್ಡು, ರೈಲು ನಿಲ್ದಾಣದ ವ್ಯವಸ್ಥಾಪಕರಾದ ನಾಗರಾಜು ಅವರ ಮೂಲಕ ಕೇಕ್ ಕಟ್ ಮಾಡಿಸುವ ಮೂಲಕ ರೈಲಿನ ಜನ್ಮದಿನವನ್ನು ಆಚರಿಸಲಾಯಿತು. ವೇದಿಕೆ ಪದಾಧಿಕಾರಿಗಳು ಎಲ್ಲ ಪ್ರಯಾಣಿಕರಿಗೂ ಕೇಕ್ ವಿತರಿಸಿ ಸಂಭ್ರಮಿಸಿದರು.ಇದೇ ಸಂದರ್ಭದಲ್ಲಿ ವೇದಿಕೆ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಜಂಟಿ ಕಾರ್ಯದರ್ಶಿಗಳಾದ ಸಗರ ಚಕ್ರವರ್ತಿ, ರಘು ರಾಮಚಂದ್ರಯ್ಯ, ನಿರ್ದೇಶಕರಾದ ರಾಮಾಂಜನೇಯ, ದೀಪಕ್ ಮತ್ತು ಇತರ ನಿರ್ದೇಶಕರು, ಡಿಆರ್‌ಯುಸಿಸಿ ಸದಸ್ಯ ರಘೋತ್ತಮ ರಾವ್ ರೋಟರಿ ತುಮಕೂರು ಅಧ್ಯಕ್ಷ ಸಿ. ನಾಗರಾಜ್, ಕಾರ್ಯದರ್ಶಿ ವಿ.ಎಸ್. ಶಿವಕುಮಾರಸ್ವಾಮಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್ ಹಾಗೂ ರೈಲ್ವೇ ಸುರಕ್ಷಾ ಪಡೆ ಮತ್ತು ರೈಲ್ವೇ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post