ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ರೇಸಿಂಗ್ ಮಾಡಿದ ಸವಾರರಿಬ್ಬರಿಗೆ ತೀರ್ಥಹಳ್ಳಿಯ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಲಾ 5 ಸಾವಿರ ರೂ. ದಂಡ ವಿಧಿಸಿದೆ.
ಸವಾರರಿಬ್ಬರು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ಹತ್ತಿರ ಬೈಕ್‌ಗಳ ರೇಸ್ ಹಾಗೂ ಅತಿವೇಗದಿಂದ ಬೈಕ್ ಚಾಯಿಸುತ್ತಿದ್ದಲ್ಲದೆ ಹಿಂಬದಿ ಕುಳಿತಿದ್ದ ಸವಾರರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತು ರೇಸಿಂಗ್ ದೃಶ್ಯವನ್ನು ಚಿತ್ರಿಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ ಅವರು ಬೈಕ್‌ಗಳನ್ನು ತಡೆದು ನಿಲ್ಲಿಸಿದ್ದು, ಸವಾರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾದೀಶರು ಇಬ್ಬರಿಗೆ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
Also read: ಸಾಗರ ಬಳಿ ರಸ್ತೆಗೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post