ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಘಟಕದ ವತಿಯಿಂದ ಆ.6ರ ಬೆಳಿಗ್ಗೆ 9:30ರಿಂದ ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ ಹಾಗೂ ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ. ಕೇಶವಮೂರ್ತಿ ತಿಳಿಸಿದರು.
ಸಂಘವು ಹಲವಾರು ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡು ಬರುತ್ತಿದೆ. ಹಳೆಯ ರೈಲ್ವೆ ನಿಲ್ದಾಣದ ಬಳಿ ಸೂಡಾದಿಂದ ನಿವೇಶನ ಮಂಜೂರಾಗಿದ್ದು, ಸುಮಾರು 2.25ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.
ಹಿರಿಯ ನಿರ್ದೇಶಕರಾದ ಉಮಾಪಾಟೀಲ, ಪ್ರಹ್ಲಾದ ಪಾಟೀಲ, ಡಾ. ಎನ್.ಆರ್. ಮಂಜುಳಾ, ಸರ್ಕಾರಿ ಸೇವೆಯಿಂದ ನಿವೃತ್ತರಾದ ಸಂಘದ ನಿರ್ದೇಶಕ ಹರೀಶ್ ಕಾರ್ಣಿಕ್, ವಿಪ್ರಶ್ರೀ ಪುರಸ್ಕøತರಾದ ಜಿ.ಎಸ್. ಅನಂತ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೆ. ರಾಮಾಚಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅವರನ್ನು ಅಭಿನಂದಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆರ್. ಅಚ್ಯುತರಾವ್, ಹೆಚ್.ಎನ್. ಛಾಯಾಪತಿ. ಯು.ಎಸ್. ಕೇಶವಮೂರ್ತಿ, ರವಿಕುಮಾರ್, ಕೆ.ಎನ್. ವಿಶ್ವನಾಥ್, ಎಲ್.ಎನ್. ಪ್ರಸಾದ್, ವನಜಾ ರವಿಕುಮಾರ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








