ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ Christ King ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಸತತ ನಾಲ್ಕನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮಾಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ ಇವುಗಳ ವತಿಯಿಂದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಸಂಸ್ಥೆಯ ಪ್ರಾಥಮಿಕ ವಿಭಾಗದ ಬಾಲಕ ಮತ್ತು ಬಾಲಕಿಯರ ಎರಡೂ ತಂಡಗಳು ಪ್ರಥಮ ಸ್ಥಾನಗಳಿಸಿ ಮೈಸೂರು ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಆಯ್ಕೆಯಾಗಿವೆ.
ಬಾಲಕರ ತಂಡವನ್ನು ಏಳನೇ ತರಗತಿಯ ರಾಯನ್ ಮಿರಾಂದ, ಗ್ಯಾಲ್ವಿನ್ ಜೋಯಲ್ ಪಿಂಟೊ, ಆರನೇ ತರಗತಿಯ ಅಶ್ವಿನ್ ಎ ಶೆಟ್ಟಿ, ಎಂಟನೇ ತರಗತಿಯ ಗೌರವ್ ಆರ್ ಪ್ರತಿನಿಧಿಸಿದರೆ ಬಾಲಕಿಯರ ತಂಡವನ್ನು ಏಳನೇ ತರಗತಿಯ ಶಗುನ್ ವರ್ಮಾ, ಶೈನಿ ಡಿ ಸೋಜಾ, ಆರನೇ ತರಗತಿಯ ಖುಷಿ ಶೆಟ್ಟಿ ಪ್ರತಿನಿಧಿಸಿದ್ದರು. ಈ ತಂಡಗಳು ಮುಂದೆ ಕೊಡಗು ಜಿಲ್ಲೆಯಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿವೆ.
Also read: ನಿಸರ್ಗದ ಸಂಪತ್ತನ್ನು ಜ್ಞಾನವಿಲ್ಲದೆ ಬರಿದು ಮಾಡುತ್ತಿರುವುದು ಬೇಸರದ ಸಂಗತಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















