ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3ರ Chandrayana-3 ಯೋಜನೆ ಮಹತ್ವದ ಘಟ್ಟ ತಲುಪಿದ್ದು, ಚಂದ್ರನ ಮೇಲೆ ಕಾಲಿಡುವ ಸಮಯ ಸನ್ನೀಹವಾಗಿದೆ.
Chandrayaan-3 Mission:
‘Thanks for the ride, mate! 👋’
said the Lander Module (LM).LM is successfully separated from the Propulsion Module (PM)
LM is set to descend to a slightly lower orbit upon a deboosting planned for tomorrow around 1600 Hrs., IST.
Now, 🇮🇳 has3⃣ 🛰️🛰️🛰️… pic.twitter.com/rJKkPSr6Ct
— ISRO (@isro) August 17, 2023
ಈ ಕುರಿತಂತೆ ಇಸ್ರೋ ISRO ಮಹತ್ವದ ಮಾಹಿತಿ ಪ್ರಕಟಿಸಿದ್ದು, ನೌಕೆಯಿಂದ ವಿಕ್ರಮ್ ಲ್ಯಾಂಡರ್ ಇಂದು ಮಧ್ಯಾಹ್ನ 1ಗಂಟೆಗೆ ಬೇರ್ಪಟ್ಟಿದ್ದು, ಚಂದ್ರನ ಮೇಲೆ ಇಳಿಯುವತ್ತ ಸಾಗಿದೆ. ಆ.೨೩ರ ವೇಳೆಗೆ ಚಂದ್ರನ ಮೇಲೆ ಮೃದುವಾದ ಲ್ಯಾಂಡ್ ಮಾಡಲು ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಭಾರದಂತೆ ಇಸ್ರೋ ವಿಜ್ಞಾನಿಗಳು ಜಾಗ್ರತೆ ವಹಿಸಿದ್ದಾರೆ.

Also read: ಸೇನೆ ಜಾಗೃತಿಗೆ ಕಾರ್ಗಿಲ್ ನಲ್ಲಿ 5 ಗಂಟೆ ಮ್ಯಾರಥಾನ್ ಮಾಡಿದ ಮೋಹನ್ ಕುಮಾರ್ ದಾನಪ್ಪ
ನೌಕೆಯಿಂದ ಕಕ್ಷೆಯ ಯಶಸ್ವಿಯಾಗಿ ಬೇರ್ಪಟ್ಟಿರುವ ಹಿನ್ನೆಲೆಯಲ್ಲಿ ಈನಂತರವಷ್ಟೇ ಲ್ಯಾಂಡಿಂಗ್ ಪ್ರದೇಶದ ಆಯ್ಕೆ ನಡೆಯಲಿದೆ. ಚಂದ್ರಯಾನ-2ರ ವೇಳೆ 4ಕಿಮೀx2.4ಕಿಮೀ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಚಂದ್ರನ ದಕ್ಷಿಣ ಧ್ರುವ ಪ್ರದೇಶವು ಗಣನೀಯ ಪ್ರಮಾಣದಲ್ಲಿ ಮಂಜುಗಡ್ಡೆಯಿಂದ ಕೂಡಿರುವ ಸಂಭವನೀಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿ ಇಳಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಇಲ್ಲಿ ಯಶಸ್ವಿಯಾಗಿ ಇಳಿದರೆ ಇಂಧನ, ಆಮ್ಲಜನಕ ಹಾಗೂ ಕುಡಿಯುವ ನೀರಿನ ಅಧ್ಯಯನದ ಸಾಧ್ಯತೆಗಳನ್ನು ಇದು ತೆರೆದಿಡುತ್ತದೆ.











Discussion about this post