ಹೊಳೆಹೊನ್ನೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂಧಿಪ್ರತಿಮೆ ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಗ್ರಾಮಾಂತರ ಎನ್‍ಎಸ್‍ಯುಐ NSUI ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ.
ಕಿಡಿಗೇಡಿಗಳ ಈ ಕೃತ್ಯದಿಂದ ನಮಗೆ ಆಘಾತವಾದಂತಾಗಿದ್ದು, ಸಂವಿಧಾನ ಮತ್ತು ಕಾನೂನಿಗ ಬಗ್ಗೆ ಗೌರವ ಇಲ್ಲದ ಕಿಡಿಗೇಡಿಗಳ ಕೃತ್ಯ ಕ್ಷಮಿಸಲಾಗದ್ದಾಗಿದೆ. ಸಮಾಜದಲ್ಲಿ ಶಾಂತಿಯನ್ನು ಕದಡುವ ವಿಧ್ವಂಸಕ ಶಕ್ತಿಗಳಿಂದ ಮಾತ್ರ ಇಂತಹ ಹೀನಕೃತ್ಯ ನಡೆಸಲು ಸಾಧ್ಯ ಎಂದು ಆರೋಪಿಸಿದರು.
Also read: ಶ್ರೀ ಭೀರಲಿಂಗೇಶ್ವರ ಜಾತ್ರೆ: ಮಾಜಿ ಶಾಸಕ ಬಂಡೆಪ್ಪ ಖಾಶೆಂಪುರ್ ವಿಶೇಷ ಪೂಜೆ ಸಲ್ಲಿಕೆ
ಜಿಲ್ಲಾ ರಕ್ಷಣಾಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ದೇಶದ್ರೋಹಿ ಕೃತ್ಯವನ್ನೆಸಗಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯ, ಕಾರ್ಯಾಧ್ಯಕ್ಷ ರವಿಕಾಟಿಕೆರೆ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಎ. ಶೆಟ್ಟಿ, ಧನರಾಜ್, ಚಂದ್ರೋಜಿ ರಾವ್, ಪ್ರದೀಪ, ಅಶೋಕ, ಕೀರ್ತಿ, ಸಾಗರ್, ಸುಜನ್, ನಿಖಿಲಾ, ವಿಷ್ಣು, ಸೂರಜ್, ದೇವಿಕುಮಾರ್, ಕಾರ್ತಿಕ್, ಮಣಿ ಮುಂತಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








