ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬ ನಗರದ ಶುಭ ಮಂಗಳ ಸಮುದಾಯ ಭವನದ ಆವರಣದಲ್ಲಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಭಾರತದ ಐತಿಹಾಸಿಕ ಕ್ಷಣ ಇಸ್ರೋದ ISRO ಚಂದ್ರಯಾನ 3 Chandrayana 3 ಯಶಸ್ವಿ ಲ್ಯಾಂಡಿಂಗ್ ಆಗುವ ದಿವ್ಯ ಕ್ಷಣವನ್ನು ದೊಡ್ಡ ಪ್ರೊಜೆಕ್ಟರ್ ಮೂಲಕ ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.
ಆ.23ರ ಬುಧವಾರ ಸಂಜೆ 6.04 ನಿಮಿಷಕ್ಕೆ ಲ್ಯಾಂಡಿಂಗ್ ಯಾವುದೇ ವಿಘ್ನಗಳು ಬಾರದೆ ನಡೆಯಲಿಯಂದು ಮಾಜಿ ಸಚಿವರು, ದೇವಾಲಯ ಸಮಿತಿಯ ಅದ್ಯಕ್ಷ ಕೆ. ಎಸ್. ಈಶ್ವರಪ್ಪ KSEshwarappa ನವರ ಅಧ್ಯಕ್ಷತೆಯಲ್ಲಿ ವಿಶೇಷ ಪೂಜೆ ಅರ್ಚನೆ ನಂತರ ಸಾಮೂಹಿಕ ಭಜನಾ ಕಾರ್ಯಕ್ರಮವು ನಡೆಯಲಿದೆ.
ನಂತರ ನಾಡಿನ ಖ್ಯಾತ ಅರ್ಥಾಶಾಸ್ತ್ರಜ್ಞ ರಾದ ಪ್ರೊಫೆಸರ್ ಬಿ ಎಂ ಕುಮಾರಸ್ವಾಮಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಕೋರಿದೆ.
Also read: ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಎಸ್. ಎಂ. ಗೋಪಿನಾಥ್ ಅಧಿಕಾರ ಸ್ವೀಕಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post