ಸಹಚೇತನ ನಾಟ್ಯಾಲಯದ ವತಿಯಿಂದ ಸೆ.1ರಿಂದ 3ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ನೃತ್ಯ ಮಹೋತ್ಸವ ನಾಟ್ಯಾರಾಧನಾ-12 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಾಟ್ಯಾಲಯದ ಗೌರವಾಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಸೆ.1ರ ಸಂಜೆ 6-30ಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಉದ್ಘಾಟಿಸುವರು. ಸೆ.2ರ ಸಂಜೆ 6-30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಬಸವಕೇಂದ್ರದ ಡಾ. ಶ್ರೀ ಬಸವಮರುಳ ಸಿದ್ದಸ್ವಾಮೀಜಿ ಸಾನಿಧ್ಯ ವಹಿಸುವರು. ಸೆ.3ರ ಸಂಜೆ 6-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಿ.ಎಸ್. ಅರುಣ್, ಪಾಲಿಕೆ ಸದಸ್ಯ ಪಿ. ಪ್ರಭಾಕರ್ ಭಾಗವಹಿಸುವರು. ಮೂರೂ ದಿನಗಳ ಕಾರ್ಯಕ್ರದಲ್ಲೂ ಕೂಡ ಸಹಚೇನತ ನಾಟ್ಯಾಲಯದ ಅಧ್ಯಕ್ಷ ಎನ್.ಆರ್.ಪ್ರಕಾಶ್. ನೃತ್ಯ ಗುರು ಸಹನಾ ಚೇತನ್ ಉಪಸ್ಥಿತರಿರುವರು ಎಂದರು.
ಸೆ.1ರಂದು ನಾಟ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಂದ ದೇವಿ ಕೃತಿಗಳ ನರ್ತನೋಲ್ಲಾಸ `ಚಿಂತಯಾಮಿ ಜಗದಂಬಾ’ ನೃತ್ಯ ಪ್ರದರ್ಶನ, ಸೆ.2ರಂದು ಸಹನಾ ಚೇತನ್ ಅವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ `ಹನುಮಂತ ದೇವ ನಮೋ’ ನಡೆಯಲಿದೆ. ನಂತರ 7 ಗಂಟೆಗೆ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ `ಜಯ ಜಯ ವಿಶ್ವ ವಿಜಯ ಬಸವ’ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.
ನೃತ್ಯಗುರು ಸಹನಾ ಚೇತನ್ ಮಾತನಾಡಿ, ಇದು ರಾಷ್ಟ್ರೀಯ ನೃತ್ಯ ಮಹೋತ್ಸವ ಆಗಿರುವುದರಿಂದ ಸೆ.3ರ ಸಂಜೆ 6-30ಕ್ಕೆ ಅಂತರಾಷ್ಟ್ರೀಯ ನೃತ್ಯ ಕಲಾವಿದರಾದ ನವದೆಹಲಿಯ ಶುಭಿ ಜೋಹರಿ ಹಾಗೂ ಅಮಿತ್ ಖಿಂಚಿ ಅವರಿಂದ ಕಥಕ್ ನೃತ್ಯ ಹಾಗೂ 7-30ಕ್ಕೆ ಪಂಚಾಬಿನ ಸಮರ ಕಲೆಯಾದ `ಘಟ್ಕಾ’ ನೃತ್ಯವನ್ನು ನಾಗಪುರದ ಕುಲ್ವಿಂದರ್ ಸಿಂಗ್ ಹಾಗೂ ತಂಡ ನಡೆಸಿಕೊಡಲಿದೆ ಎಂದರು.
Also read: ಶಿವಮೊಗ್ಗಕ್ಕೆ ಬಂದೇ ಬಿಡ್ತು ಮೊದಲ ಇಂಡಿಗೋ ವಿಮಾನ: ಯಾರೆಲ್ಲಾ ಬಂದರು? ಹೇಗಿತ್ತು ಸ್ವಾಗತ?
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚೇತನ್, ಮಾಲತೇಶ್, ನಾಗಮಣಿ, ವಿನಯ್, ಆನಂದರಾಮ್, ಸಿಂಧುಶ್ರೀ, ದಿನೇಶ್ ಆಚಾರ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















