ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಸಂಕಲ್ಪ ಹೊಂದಿರುವೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ Minister Bangarappa ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್‍ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಶಿಕ್ಷಣ ಖಾತೆ ಸಿಕ್ಕಿರುವುದು ನನಗೊಂದು ಸವಾಲೇ ಸರಿ. ಇದನ್ನು ನಿಭಾಯಿಸುತ್ತೇನೆ ಎಂಬ ನಂಬಿಕೆಯಿಂದ ನಮ್ಮ ನಾಯಕರು ನನಗೆ ಈ ಖಾತೆ ನೀಡಿದ್ದಾರೆ. ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಕೇವಲ 100 ದಿನಗಳಲ್ಲಿಯೇ ಕೆಲವು ಬದಲಾವಣೆಗಳಾಗಿವೆ.ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳ ಮೂಲಕ ಶಿಕ್ಷಣ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡುಹೋಗುವೆ ಎಂದರು.
ಬಿಜೆಪಿ ಸರ್ಕಾರ ನಮ್ಮ ಮಕ್ಕಳಿಗೆ ಬೇಡವಾದ ಪಠ್ಯಗಳನ್ನು ಸೇರಿಸಿ ಕೆಟ್ಟ ಬುದ್ಧಿ ತುಂಬಿತ್ತು. ಆ ಹೊಲಸನ್ನು ತೆಗೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಹಾಗಾಗಿಯೇ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯಗಳನ್ನು ಕೈಬಿಟ್ಟಿದ್ದೇವೆ ಎಂದ ಅವರು, ಖಾಯಂ ಶಿಕ್ಷಕರ ಬೇಡಿಕೆ ಹೆಚ್ಚಾಗಿದೆ. ನ್ಯಾಯಾಲಯದ ಆದೇಶ ಬಂದ ತಕ್ಷಣ ಸುಮಾರು 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಿವಮೊಗ್ಗದ ಏರ್‍ಪೋರ್ಟ್ ಅನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿಪಡಿಸಲಾಗುವುದು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಮತ್ತಷ್ಟು ಸಹಕಾರ ನೀಡಬೇಕು. ಉಡಾನ್ ಯೋಜನೆ ಜಾರಿಯಾಗಬೇಕು. ಈಗ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸುಮಾರು 14ಸಾವಿರ ದರವಿದೆ. ಮೋದಿಯವರು ಹೇಳಿದಂತೆ ಹವಾಲಿ ಚಪ್ಪಲಿ ಧರಿಸುವವನು ಈ ದರದಲ್ಲಿ ವಿಮಾನ ಏರಲು ಸಾಧ್ಯವಿಲ್ಲ. ಆದರೆ ಹವಾಯಿ ಚಪ್ಪಲಿ ಧರಿಸುವವನಿಗೆ ನಮ್ಮ ಸರ್ಕಾರ ಶಕ್ತಿ ತುಂಬುತ್ತಿದೆ. ಅದೇನೇ ಇದ್ದರೂ ಶಿವಮೊಗ್ಗಕ್ಕೆ ವಿಮಾನ ಬರುತ್ತಿರುವುದು ಅತ್ಯಂತ ಸ್ವಾಗತಾರ್ಹ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದರು.
ನಳಿನ್‍ಕುಮಾರ್ ಕಟೀಲ್ ಟೀಕೆಗೆ ಕಟುವಾಗಿ ಉತ್ತರ ನೀಡಿದ ಅವರು, ಕಟೀಲು ಅವರಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಜನರು ಅವರಿಗೆ ಸರಿಯಾದ ಶಿಕ್ಷೆ ನೀಡಿದ್ದಾರೆ. ಸೊರಬದ ಜನತೆ ನನ್ನನ್ನು 44 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಮೋದಿ ಅವರು ಈ ಕಟೀಲರನ್ನು ಎಲ್ಲಿ ನಿಲ್ಲಿಸಿದ್ದರು ಎಂದು ಅರ್ಥ ಮಾಡಿಕೊಳ್ಳಲಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post