ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಂಗಿರಣ ಸಂಸ್ಥೆ ವತಿಯಿಂದ ಸೆ.3ರಂದು ಸಂಜೆ 6-45ಕ್ಕೆ ಸುವರ್ಣ ಸಂಸ್ಕøತಿ ಭವನದಲ್ಲಿ `ನಿರಾಕರಣೆ’ ಎಂಬ ಏಕವ್ಯಕ್ತಿ ರಂಗಪ್ರಯೋಗವನ್ನು one-man play ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಹಾಗೂ ರಂಗಕರ್ಮಿ ಚಂದ್ರಶೇಖರ ಶಾಸ್ತ್ರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೇಖಕಿ ವೀಣಾ ಶಾಂತೇಶ್ವರ ಅವರ ಕಥೆಯನ್ನು ಆಧರಿಸಿದ ನಿರಾಕರಣೆ ಎಂಬ ರಂಗರೂಪವನ್ನು ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ಭಾರತೀಯ ಕಾವ್ಯ ಪುರಾಣಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಬಹಳ ಮುಖ್ಯವಾಗಿದ್ದರೂ ಕೂಡ ಅಲ್ಲಿಂದ ಇಲ್ಲಿಯವರೆಗೆ ಶೋಷಣೆಯ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ನಾವ್ಯಾರೂ ಗಳಿಸಿಕೊಂಡಿಲ್ಲ. ಇದನ್ನೇ ಮುಖ್ಯವಾಗಿಟ್ಟುಕೊಂಡು ಪ್ರಸ್ತುತ ನಾಟಕದಲ್ಲಿ ಬರುವ ದುಶ್ಯಂತ ಹಾಗೂ ಶಕುಂತಲೆಯರ ಕಥೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡುವ ರೀತಿಯೇ ಈ ರಂಗಪ್ರಯೋಗವಾಗಿದೆ ಎಂದರು.
ಹೊಂಗಿರಣ ಸಂಸ್ಥೆಯು ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿದೆ, ಪ್ರಶಸ್ತಿಗಳನ್ನು ಪಡೆದಿದೆ. ಈಗ ಏಕವ್ಯಕ್ತಿ ರಂಗಪ್ರಯೋಗವನ್ನು ಮಾಡುತ್ತಿದೆ. ಇದರ ಪ್ರಮುಖ ಪಾತ್ರಧಾರಿ ಶ್ರುತಿ ಆದರ್ಶ್ ಆಗಿದ್ದು ಇವರು ರಂಗಭೂಮಿಯಲ್ಲಿ ಅಪಾರ ಆಸಕ್ತಿ ವಹಿಸಿದ್ದರೂ ಕೂಡ ಅವಕಾಶಗಳು ಸಿಕ್ಕಿರಲಿಲ್ಲ. ಇದು ಅವರ ಮೊದಲ ಪ್ರವೇಶವಾಗಿದೆ. ಇವರಿಂದ ಬಹಳಷ್ಟು ನಿರೀಕ್ಷೆ ಇದೆ ಎಂದರು.
Also read: ಸೆ.2, 3 ಪದವಿ ಪೂರ್ವ ಕಾಲೇಜುಗಳ ಬಾಲಕರಿಗಾಗಿ ವಾಲಿಬಾಲ್ ಪಂದ್ಯಾವಳಿ
ಪತ್ರಿಕಾ ಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ಗಣೇಶ್ ಸಹ್ಯಾದ್ರಿ, ಗಿರಿಧರ್, ನಟಿ ಕಲಾವಿದೆ ಶ್ರುತಿ ಆದರ್ಶ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















