ಕಲ್ಪ ಮೀಡಿಯಾ ಹೌಸ್ | ಸೊರಬ |
ಬೆರಳೆಣಿಕೆ ಜನಪ್ರತಿನಿಧಿಗಳ ಉದ್ರೇಕಕಾರಿ ಮಾತಿನಿಂದ ನಮ್ಮ ನೆಲೆಯ ಪರಿಸರ ನಾಶಗೊಂಡಿದೆ. ಪರಿಸರ ನಾಶಕ್ಕೆ ಇಲಾಖೆಯೂ ಕಾರಣವಾಗಿದ್ದು ಜನಸಾಮಾನ್ಯರಿಗೆ ಪರಿಸರ ಕಾಳಜಿಯನ್ನು ಮೂಡಿಸುವಲ್ಲಿ ಪರಿಸರ ಸಂಘಟನೆಗಳು ಹೆಣಗಾಡಬೇಕಾದಂತಹ ಪರಿಸ್ಥಿತಿ ಬಂದಿರುವುದು ಖೇದಕರ ಸಂಗತಿ ಎಂದು ವಕೀಲ ವೈ.ಜಿ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಹೆಚ್.ಪಿ.ಆರ್.ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಾರ ಸಂಸ್ಥೆ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ ಸಹ್ಯಾದ್ರಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಲವು ಕಟ್ಟುಪಾಡುಗಳನ್ನು ತಾನೆ ನಿರ್ಮಿಸಿಕೊಂಡು ಅಗತ್ಯವಿರುವ ಮರಗಳನ್ನು ಬಳಸಿಕೊಂಡು ಈ ನೆಲೆಗೆ ಹಸಿರು ಹೊದಿಕೆಯನ್ನು ಉಳಿಸಿಕೊಟ್ಟವರು ಜನಸಾಮಾನ್ಯರು. ಕಾಲಕ್ರಮೇಣ ಯಾರದೋ ಸ್ವಾರ್ಥಕ್ಕೆ, ದುರಾಸೆಗೆ ತಾನು ಬಲಿಯಾಗುವುದರ ಜೊತೆಗೆ ಪರಿಸರವನ್ನು ನಾಶದತ್ತ ಒಯ್ದಿದ್ದು, ಉಳಿದಷ್ಟನ್ನಾದರೂ ಕಾಯ್ದುಕೊಳ್ಳಬೇಕಾದುದು ಎಲ್ಲರ ಕರ್ತವ್ಯ ಎಂದರು.
Also read: ಉಡುಪಿಯಲ್ಲಿ ಅಷ್ಟಮಿ ಸಂಭ್ರಮ: ಶ್ರೀಗಳಿಂದ ಅರ್ಘ್ಯ ಪ್ರಧಾನ, ಕೃಷ್ಣಮಯವಾದ ಉಡುಪಿ
ಮುಖ್ಯ ಅತಿಥಿ ಹಿರಿಯ ವಕೀಲ ಎಂ.ಆರ್.ಪಾಟೀಲ್ ಮಾತನಾಡಿ, ಪಶ್ಚಿಮ ಘಟ್ಟಗಳ ಉಳಿವಿನ ಔಚಿತ್ಯತೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ನರ್ಸಿಂಗ್ ಸ್ಕೂಲ್ ನ ಮುಖ್ಯಸ್ಥ ಮಂಜುನಾಥ್, ಪತ್ರಕರ್ತ ಸಂಘದ ದಿನಕರ ಭಾವೆ, ಮಹೇಶ ಗೋಖಲೆ ಪರಿಸರ ನಾಶದ ದುಷ್ಪರಿಣಾಮಗಳ ಕುರಿತು, ಪುನಶ್ಚೇತನದ ಹಾದಿಯ ಕುರಿತು ಅನಿಸಿಕೆ ಹಂಚಿಕೊಂಡರು.
ಸಾರ ಸಂಸ್ಥೆ ಸಂಚಾಲಕ ಧನುಷ್, ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಸಹ್ಯಾದ್ರಿ ಸಂವಾದದಲ್ಲಿ ಪಾಲ್ಗೊಂಡರು.
ಸಂವಾದದಲ್ಲಿ ಪಾಲ್ಗೊಂಡ ಶಿಕ್ಷಣಾರ್ಥಿಗಳ ಜೊತೆಗೆ ಸಾರ ಸಂಸ್ಥೆಯ ಮೇಘರಾಜ, ನರ್ಸಿಂಗ್ ಸ್ಕೂಲ್ ಉಪನ್ಯಾಸಕ, ಸಿಬ್ಬಂದಿ ಇದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















