ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಬ್ರಿಟನ್ ಪ್ರಧಾನಿ ರಿಷಿ ಸುನಕ್ Rishi Sunak ಅವರ ತಂದೆ, ತಾಯಿ ಹಾಗೂ ಇನ್ಫೋಸಿಸ್’ನ ಸುಧಾ ನಾರಾಯಣ ಮೂರ್ತಿ ಅವರುಗಳು ಮಂತ್ರಾಲಯಕ್ಕೆ Mantralaya ಭೇಟಿ ನೀಡಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ Shri Raghavendra Gurusaarvabhouma ದರ್ಶನ ಪಡೆದು, ಪೀಠಾಧಿಪತಿಗಳಿಂದ ಫಲ-ಮಂತ್ರಾಕ್ಷತೆ ಪಡೆದರು.
ರಿಷಿ ಸುನಕ್ ತಂದೆ ಯಶವೀರ್ ಸುನಕ್, ತಾಯಿ ಉಷಾ ಸುನಕ್ ಹಾಗೂ ಅವರ ಅತ್ತೆ-ಇನ್ಪೋಸಿಸ್’ನ ಸುಧಾಮೂರ್ತಿ Sudhamurthy ಅವರುಗಳು ಮಂತ್ರಾಲಯಕ್ಕೆ ಭೇಟಿ ನೀಡಿದರು. ಶ್ರೀರಾಘವೇಂದ್ರ ಗುರುಸಾರ್ವಭೌಮರ ಮೂಲ ಬೃಂದಾವನದ ದರ್ಶನ ಪಡೆದ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥ ಶ್ರೀಪಾದಂಗಳವರ ದರ್ಶನ ಪಡೆದರು. ಮೂವರು ಗಣ್ಯರಿಗೆ ಶ್ರೀಗಳು ಶೇಷವಸ್ತ್ರ, ಫಲ ಮಂತ್ರಾಕ್ಷತೆ, ಸ್ಮರಣಿಕೆ ನೀಡಿ ಅನುಗ್ರಹ ಮಾಡಿದರು.
Also read: ಸ್ಮಾರ್ಟ್ ಸಿಟಿಯ 2.5 ಕೋಟಿ ಗಿಡಗಳು ಎಲ್ಲಿ? ಕಾಮಗಾರಿ ನಿರ್ವಹಣೆ ಎಲ್ಲಿ? ಫುಟ್’ಪಾತ್’ಗಳು ಎಲ್ಲಿ?
ಹೆಚ್ಚುವರಿಯಾಗಿ, ಸ್ವಾಮೀಜಿಯವರು ಗುರುರಾಯರ ಪವಿತ್ರ ಪ್ರಸಾದವನ್ನು ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ಅವರ ಹೆತ್ತವರಿಗೆ ತಲುಪಿಸಲು ದಯಪಾಲಿಸಿದರು.
ತಮ್ಮ ಪುತ್ರ ಹಾಗೂ ಅಳಿಯ ವಿಶ್ವದ ಬಲಾಢ್ಯ ರಾಷ್ಟ್ರದ ಪ್ರಧಾನಿಯಾಗಿದ್ದರೂ ಯಾವುದೇ ಹಮ್ಮುಬಿಮ್ಮುಗಳಿಲ್ಲದೇ, ತಮ್ಮ ಮೂಲ ಧರ್ಮವನ್ನು ಮರೆಯದೇ ಶ್ರೀಮಠ ಹಾಗೂ ದೇವಾಲಯಗಳಿಗೆ ಇವರು ಭೇಟಿ ನೀಡುತ್ತಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post