ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಮಹಾನುಭಾವರಾದ ಶ್ರೀ ಸತ್ಯಧರ್ಮ ತೀರ್ಥರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು Shri Sathyathma Thirtha Shripadaru ಹೇಳಿದರು.
ತಮ್ಮ 28ನೆಯ ಚಾತುರ್ಮಾಸ್ಯದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ಪೂರ್ವಾರಾಧನಾ ಅಂಗವಾಗಿ ಅನುಗ್ರಹ ಸಂದೇಶ ನೀಡಿದರು.
ಅವರ ಒಂದೊಂದು ಮಾತನ್ನು ತಿಳಿದುಕೊಳ್ಳಲು ಸಾಕಷ್ಟು ಕೌಶಲಬೇಕು. ಇದರಿಂದ ಅವರ ಪಾಂಡಿತ್ಯವೂ ತಿಳಿಯುತ್ತದೆ. ಸಾರ್ಥಕವಾದ ಧರ್ಮಾನುಷ್ಠಾನ ಮಾಡಿದವರು. ಅವರ ಗ್ರಂಥಗಳ ವೈಭವ ಎಷ್ಟು ಹೇಳಿದರೂ ಕಡಿಮೆಯೇ. ಒಂದೊಂದು ವ್ಯಾಖ್ಯಾನದ ವೈಶಿಷ್ಟ್ಯ ತಿಳಿಯಲು ಸಾಕಷ್ಟು ಸಮಯ ಬೇಕು. ಶ್ರೀಶ್ರೀ ಸತ್ಯಧರ್ಮತೀರ್ಥರ ಗ್ರಂಥಗಳ ವೈಭವ ಎಷ್ಟು ಹೇಳಿದರೂ ಕಡಿಮೆಯೇ. ಶ್ರೀ ಸತ್ಯಾತ್ಮತೀರ್ಥರು ಸತ್ಯಧರ್ಮರ ತಪಸ್ಸು, ಸಾಧನೆ, ದೇವರು ಅವರಿಗೆ ಒಲಿದ ರೀತಿ ಎಲ್ಲವೂ ಅದ್ಭುತ ಎಂದರು.
ಪೋಷಕರು ಸಂಸ್ಕಾರಿಗಳಾಗಿ
ಪ್ರವಚನ ನೀಡಿದ ಪಂಡಿತ ಮೊಕಾಶಿ ಮಧ್ವಾಚಾರ್ಯರು, ಮೊದಲು ಧರ್ಮದ ಮಾತನಾಡಿ ಮಿತ್ರತ್ವವನ್ನು ಬಯಸಬೇಕು. ಯಾರದ್ದೋ ಸ್ನೇಹ ಮಾಡಿ ಪ್ರಯೋಜನ ಇಲ್ಲ. ಮಕ್ಕಳಿಗೆ ಸಂಸ್ಕಾರ ಸಿಗಬೇಕಾದರೆ ಮೊದಲು ತಂದೆ ತಾಯಂದಿರಲ್ಲಿ ಸಂಸ್ಕಾರ ಇರಬೇಕು. ತಂದೆ ತಾಯಂದಿರೇ ದಾರಿ ಬಿಟ್ಟರೆ ಮಕ್ಕಳಿಂದ ಸಂಸ್ಕಾರ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಹೀಗಾಗಿ ಪೋಷಕರು ಜಾಗೃತಿ ಆಗಬೇಕು ಎಂದರು.
ಉತ್ತರಾದಿ ಮಠದ ಪೀಠ ಅಲಂಕರಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ. ತಪಸ್ವಿಗಳಾಗಿದ್ದರೆ ಮಾತ್ರ ಮೂಲ ರಾಮ ಸೀತಾದೇವಿಯ ವಿಗ್ರಹವನ್ನು ಮುಟ್ಟಲು ಸಾಧ್ಯ. ನಮ್ಮ ಸ್ವಾಮಿಗಳು ಕೂಡ ಮಹಾನ್ ತಪಸ್ವಿಗಳು, ವೈರಾಗ್ಯ ಶಿಖಾಮಣಿಗಳು ಇಂತಹ ಗುರುಗಳು ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು.
ಪಂಡಿತ ವಿಶ್ವ ಪ್ರಜ್ಞಾಚಾರ್ಯ ಮಾಹುಲಿ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ತೊರವಿ ನರಸಿಂಹ ದೇವರ ಶೇಷವಸ್ತçವನ್ನು ಅಲ್ಲಿನ ಅರ್ಚಕರು ಸಮರ್ಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post