ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಜಿಲ್ಲೆಯ ಪ್ರತಿಷ್ಠಿತ ವಿಐಎಸ್’ಎಲ್ ಕಾರ್ಖಾನೆಯನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಭರವಸೆ ನೀಡಿದರು.
ನಗರದ ಜನ್ನಾಪುರದಲ್ಲಿರುವ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 163ನೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಡೀ ಸಭಾಂಗಣವೇ ತುಂಬಿ ತುಳುಕುವಷ್ಟು ಜನ ಇಲ್ಲಿ ಸೇರಿದ್ದೀರಿ. ಶ್ರೀ ವಿಶ್ವೇಶ್ವರಯ್ಯನವರು ಇಷ್ಟು ವರ್ಷಗಳ ನಂತರವೂ ಹೇಗೆ ಇನ್ನೂ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರೀತಿಯಿಂದ ಉಳಿದುಕೊಂಡಿದ್ದಾರೆ ಅನ್ನುವುದಕ್ಕೆ ಸಾಕ್ಷಿ. ಭದ್ರಾವತಿಯವರ ಪಾಲಿಗಂತೂ ಸರ್’ಎಂವಿ ಅವರು ಸಾಕ್ಷಾತ್ ದೇವರ ಹಾಗೆ ಎಂದರು.

ಎನ್.ಟಿ. ಕೃಷ್ಣಪ್ಪ ಮಾತನಾಡಿ, ಮುಂದಿನ ಪೀಳಿಗೆಗೆ ಈ ಕಾರ್ಖಾನೆ ಉಳಿಯಬೇಕು ಭರವಸೆಯಾಗಿ ಉಳಿಯಬಾರದು. ನೂರಾರು ವರ್ಷ ಈ ಕಾರ್ಖಾನೆ ಮುಂದಿನ ಯುವಕರಿಗೆ ಕೆಲಸ ಸಿಗುವಂತಾಗಬೇಕು. ವೇದಿಕೆ ಮೇಲೆ ಇರುವ ಎಲ್ಲಾ ರಾಜಕಾರಣಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ. ಈ ಕಾರ್ಖಾನೆ ಬಂಡವಾಳ ತೊಡಗಿಸಲು ತಾವೆಲ್ಲ ರಾಜಕೀಯವಾಗಿ ಪ್ರಯತ್ನಿಸಿ ವಿಶ್ವೇಶ್ವರಯ್ಯನವರ ಹೆಸರನ್ನು ಉಳಿಸಬೇಕು ಎಂದರು.

ನರಸಿಂಹಾಚಾರ್ ಕಾರ್ಯಕ್ರಮ ನಿರೂಪಿಸಿ, ಆಡಿ ವಿಷಯ ಯಾರವ ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಕಾರ್ಮಿಕ ಸಂಘದ ಅಧ್ಯಕ್ಷರಾದ ಬಿ.ಜಿ. ರಾಮಲಿಂಗಯ್ಯ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	




 Loading ...
 Loading ... 
							



 
                
Discussion about this post