ಕಲ್ಪ ಮೀಡಿಯಾ ಹೌಸ್ | ಚಾರ್ಮಾಡಿ |
ಮಳೆಯಿಂದಾಗಿ ದಟ್ಟ ಮಂಜು ಆವರಿಸಿಕೊಂಡಿದ್ದ ಪರಿಣಾಮ ಲಾರಿಯೊಂದು ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟಿಯ Charmadi Ghat ಸೋಮನಕಾಡು ಬಳಿ ನಡೆದಿದೆ.
ನೀರಿನ ಬಾಟಲ್ ತುಂಬಿದ ಲಾರಿ ಶುಕ್ರವಾರ ರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ಸಾಗುತ್ತಿದ್ದ ವೇಳೆ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿದ್ದ ಪರಿಣಾಮ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ. ಇನ್ನು ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬೀಳುವಾಗ ದೈತ್ಯ ಮರಕ್ಕೆ ಲಾರಿ ಸಿಲುಕಿಕೊಂಡ ಪರಿಣಾಮ ಹೆಚ್ಚಿನ ಅವಘಡ ತಪ್ಪಿದೆ ಎನ್ನಲಾಗಿದೆ.
ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಾಗಿಲ್ಲ. ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post