ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀರಾಂಪುರ ರಿಂಗ್ ರಸ್ತೆಯ ಅಕ್ಕಪಕ್ಕದ ಪ್ರದೇಶಗಳ ಸ್ವಚ್ಛತೆ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾಗೃತಿ #PlasticBan ಮೂಡಿಸುವ ಅಭಿಯಾನವನ್ನು ನಡೆಸಲಾಯಿತು.
ನಿರಂತರವಾಗಿ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ನಿವಾಸಿಗಳ ಹಿತರಕ್ಷಣಾ ಸಮಿತಿಯ ಈ ಅಭಿಯಾನವನ್ನು ಶ್ರೀರಾಂಪುರ ಪಟ್ಟಣ ಪಂಚಾಯ್ತಿ ಸಹಯೋಗದೊಂದಿಗೆ ನಡೆಸಿತು.
ಇಂಡಿಯನ್ ಸ್ವಚ್ಚತಾ ಲೀಗ್ ಸೀಸನ್ 2 ರ ಅಂಗವಾಗಿ ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯು ಸ್ವಚ್ಛತಾ ಸೇವಾಕಾರ್ಯಗಳನ್ನು ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಅಭಿಯಾನದ ಪ್ರಯುಕ್ತ ಶ್ರೀರಾಂಪುರ ರಿಂಗ್ ರಸ್ತೆಯ ಸಿಗ್ನಲ್ ಲೈಟ್ #SignalLight ಹತ್ತಿರ ಸ್ವಚ್ಛತಾ ಸೇವಾ ಕಾರ್ಯ ಹಾಗೂ ರಸ್ತೆ ಬದಿಯ ವ್ಯಾಪಾರಿಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ವಹಿವಾಟು ನಿಷೇಧ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು ಮಾತನಾಡಿ, ರಿಂಗ್ ರಸ್ತೆಯು ಮೈಸೂರಿನ ಅತ್ಯಂತ ಸುಂದರ ಹಾಗೂ ವಿಶಾಲವಾದ ರಸ್ತೆಯಾಗಿದೆ. ಸಾರ್ವಜನಿಕರು ಈ ರಸ್ತೆಯನ್ನು ಅತಿ ಹೆಚ್ಚು ಬಳಸುತ್ತಿದ್ದು ಈ ರಸ್ತೆಯು ಮೈಸೂರನ್ನು ವಿವಿಧ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯೂ ಆಗಿದೆ. ವಾಹನ ಸವಾರರು ಈ ರಸ್ತೆಯನ್ನು ಬೆಳೆಸುವಾಗ ತಾವು ತಿಂದ ನಂತರ ಉಳಿದ Lays packet , Kurkure packet, water bottle, tissue paper ಸೇರಿದಂತೆ ಹಲವಾರು ತ್ಯಾಜ್ಯ ವಸ್ತುಗಳನ್ನು ರಸ್ತೆಗೆ ಎಸೆದು ಮುಂದೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರ ಜೊತೆಗೆ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರ ಮಾಡುವವರು ರಿಂಗ್ ರಸ್ತೆಯ ಹತ್ತಿರ ಕಸಗಳನ್ನು ಸುರಿಯುವುದು ಸಾಮಾನ್ಯವಾಗಿದೆ. ಇದರಿಂದ ನೈರ್ಮಲ್ಯ ಮೂಡುವುದಲ್ಲದೆ ರಿಂಗ್ ರಸ್ತೆಯಲ್ಲಿ ಮಳೆ ನೀರು ಹೋಗಲು ಮಾಡಿರುವ ಜಾಗಗಳು ಮುಚ್ಚಿ ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಇದನ್ನು ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರು ಸ್ವಚ್ಚತೆ ಮಾಡುತ್ತಾರೆ ಸಾರ್ವಜನಿಕರಾದ ನಾವು ಗಾರ್ಬೇಜ್ ಜೆನೆರೆಟರ್ ಆಗದೆ ಸ್ವಚ್ಚತಾ ಪ್ರಮೋಟರ್ ಆಗಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಎಂ, ಆರೋಗ್ಯಾಧಿಕಾರಿ ಪರಮೇಶ್ವರ್, ಕೇಂದ್ರ ರೇಷ್ಮೆ ಮಂಡಳಿಯ ರಮೇಶ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು, ವಿಶ್ವವಿದ್ಯಾಲಯ ಬಡಾವಣೆ ನಿವಾಸಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post