ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇವತ್ತಿನ ಆಧುನಿಕ ಜಗತ್ತಿನ ವಿದ್ಯಾರ್ಥಿಗಳಿಗೆ ಕೌಶಲ್ಯ ತುಂಬಾ ಮುಖ್ಯ, ತಂತ್ರಜ್ಞಾನೋಧ್ಯಮ ಕ್ಷೇತ್ರವು ಎಲ್ಲರಿಗೂ ಮುಕ್ತವಾದ ಅವಕಾಶವನ್ನು ಕೊಟ್ಟಿದೆ. ಪ್ರತಿಯೊಬ್ಬ ಉದ್ಯಮಿ ಕೂಡ ತನ್ನದೇ ಆದ ಕೌಶಲ್ಯಾದಾರಿತ ನವ ಆಲೋಚನೆಗಳನ್ನು ಹೊಂದಿರಬೇಕಾಗಿರುತ್ತದೆ. ಉದ್ಯಮ ಕ್ಷೇತ್ರವು ಪ್ರತಿಯೊಂದು ಕೌಶಲ್ಯವನ್ನು ಪ್ರಶಂಶಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಸ್ನೇಹಲ್ ಸುಧಾಕರ್ ಲೋಖಂಡೆ Snehal Lokande ಹೇಳಿದರು.
ಇಂದು ನಗರದ ಸಹ್ಯಾದ್ರಿ ಕಾಲೇಜಿನ Sahyadri College ಪಾಥ್ವೇಸ್ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಘಟಕ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡ್ವಾನ್ಸಡ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿ ಇವರ ಸಹಯೋಗದಲ್ಲಿ “Techpreneur Toolkit” (ಟೆಕ್ನಾಪ್ರೆನೆರ್ ಟೂಲ್ ಕಿಟ್)ಎಂಬ ಶೀರ್ಷಿಕೆ ಅಡಿಯಲ್ಲಿ ತಂತ್ರಜ್ಞಾನೋಧ್ಯಮ ಆಧಾರಿತ ಎರಡು ದಿನದ ವಿಶೇಷ ಕಾರ್ಯಾಗಾರವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿಭೆಗಳು ತುಂಬಾ ಇದೆ ಆದರೆ ಅವರಿಗೆ ಆರ್ಥಿಕ ಸಹಾಯ ಸಿಗದ ಕಾರಣ ಉದ್ಯಮ ಕ್ಷೇತ್ರದಿಂದ ಹಿಂಜರಿಯುತ್ತಿದ್ದಾರೆ. ಹೊಸ ಮತ್ತು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಟ್ಯಾಂಡಪ್ ಇಂಡಿಯಾ, ಮುದ್ರಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಹಲವಾರು ಪ್ರತಿಷ್ಠಿತ ಬ್ಯಾಂಕ್ ಗಳು ಕೂಡ ತಂತ್ರಜ್ಞಾನಾಧಾರಿತ ತರಬೇತಿಯನ್ನು ನೀಡುತ್ತಿದೆ ಯುವಸಮೂಹವು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, 2050 ರಲ್ಲಿ ಎಲ್ಲಾ ವ್ಯಕ್ತಿಗಳು ಒಂದಲ್ಲ ಒಂದು ಉದ್ಯಮ ದಲ್ಲಿ ಪರಿಣಿತಿ ಹೊಂದಿರಬೇಕೆನ್ನುವುದೇ ಅಡ್ವಾನ್ಸ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿಯ ಧ್ಯೇಯವಾಗಿದೆ. ಪ್ರಪಂಚದಲ್ಲೇ ಭಾರತವು ಇನ್ನೂ ಕೆಲವೇ ವರ್ಷಗಳಲ್ಲಿ ಆರ್ಥಿಕತೆಯಲ್ಲಿ ತಲುಪಲಿದೆ. ಇದಕ್ಕೆ ಯುವ ಉದ್ಯಮಿಗಳು ಕೊಡುಗೆ ಬಹಳ ಅವಶ್ಯಕತೆ ಇದೆ ಎಂದರು.
ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಬರುಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತರಬೇತಿಯನ್ನು ನೀಡಿ ಸಧೃಡರನ್ನಾಗಿ ಮಾಡುತ್ತದೆ. ಉದ್ಯಮಿಯಾಗಲು ಮೊದಲು ಈ ನೆಲದ ಕಾನೂನು ಗೊತ್ತಿರಬೇಕು ಮತ್ತು ಕೌಶಲ್ಯ ತಿಳಿದಿರಬೇಕು ಹಾಗೂ ನಾಳೆಯಿಂದಲ್ಲಾ ಇಂದಿನಿಂದಲೇ ತಯಾರಿ ಆರಂಭಿಸಬೇಕು ಎಂದು ಹೇಳಿದರು.
Also read: ಸಾರ್ವಜನಿಕರ ಗಮನಸೆಳೆಯುತ್ತಿದೆ 30 ಅಡಿ ಎತ್ತರದ ಉಗ್ರನರಸಿಂಹ, ಚಂದ್ರಯಾನ ಪ್ರತಿಕೃತಿ
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಕೆ. ವೀಣಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವುದು ಹಾಗೂ ನವಚೇತನ್ಯವನ್ನು ಮೂಡಿಸುವುದು ಕಾರ್ಯಾಗಾರಗಳ ಮೂಲ ಉದ್ದೇಶವಾಗಿದೆ.ಇಂದಿನ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ ಅತೀಮುಖ್ಯವಾಗಿದೆ ಸಮಯವನ್ನು ವ್ಯರ್ಥ ಮಾಡದೆ ಎಲ್ಲಾ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎರಡು ದಿನದ ಈ ಕಾರ್ಯಗಾರವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಪಾಥ್ವೇಸ್ ಘಟಕದ ನಿರ್ದೇಶಕರಾದ ಪ್ರೊ. ರಮೇಶ್ ಸಿ ಕೆ ಮಾತನಾಡಿ ಎರಡು ದಿನದ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್ ರಾಜೇಶ್ವರಿ ಮತ್ತು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಧನಂಜಯ ಕೆ.ಬಿ, ಅಡ್ವಾನ್ಸಡ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿಯ ಸಿ.ಇ.ಓ ಸವಿತಾ ಮಾಧವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post