ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಗಿಗುಡ್ಡದಲ್ಲಿ ನಿನ್ನೆ ನಡೆದ ಅಹಿತಕರ ಘಟನೆ ಪೂರ್ವ ನಿಯೋಜಿತ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಒತ್ತಾಯಿಸಿದರು.
ಘಟನಾ ಸ್ಥಳ ರಾಗಿಗುಡ್ಡಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ MLA Chennabasappa ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಅನೇಕ ವಾಹನಗಳು ನಗರಕ್ಕೆ ಬಂದಿವೆ. ಈ ವಾಹನಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈದ್ ಮಿಲಾದ್ Eid Milad ಮೆರವಣಿಗೆ ಮುಂದೆ ಸಾಗಿದ ನಂತರ ಒಂದು ಗುಂಪು ಹಿಂತಿರುಗಿದೆ. ಅವರು ತಮ್ಮ ಮನೆಗಳಿಗೆ ಮರಳುವ ಬದಲು ಬೇರೆ ಮನೆಗಳಿಗೆ ನುಗ್ಗಿದ್ದಾರೆ. ಶಾಂತಮ್ಮ ಎಂಬ ಮಹಿಳೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಬಿಡಿಸಲು ಹೋದ ಯುವಕನ ಮೇಲು ಹಲ್ಲೆ ನಡೆಸಿದ್ದಾರೆ. ವಿವಿಧ ಅಡ್ಡರಸ್ತೆಗಳಲ್ಲಿ ಆಟೋಗಳು, ವಾಹನಗಳು, ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ಘಟನೆ ಪೂರ್ವ ನಿಯೋಜಿತ ಎಂದು ಅನಿಸುತ್ತದೆ ಎಂದು ಶಾಸಕ ಚನ್ನಬಸಪ್ಪ ಆರೋಪಿಸಿದ್ದಾರೆ.
Also read: ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ಜಾರಿ: ಪಾಲಿಸಬೇಕಾದ ನಿಬಂಧನೆಗಳೇನು?
ರಕ್ಷಣೆ ಕೊಡುವವರು ಇದ್ದಾರೆ ಎಂದರೆ ಅವರು ಬಾಲ ಬಿಚ್ಚುವುದು ಸಹಜ. ರಕ್ಷಣೆ ಕೊಡುವ ಮಾನಸಿಕತೆಯಲ್ಲಿ ಸರ್ಕಾರದ ಮಾತು ಇದೆ. ಈ ಘಟನೆ ಹಿನ್ನೆಲೆ ಸರ್ಕಾರವು ಯೋಚನೆ ಮಾಡಬೇಕು. ಕ್ಷುಲಕ ಕಾರಣಕ್ಕೆ ಇಂತಹ ಕೃತ್ಯ ಎಸಗುವವರಿಗೆ ಶಕ್ತಿ ಕೊಡುವಂತಹ ಪ್ರಯತ್ನ ಆಗಬಾರದು ಎಂದು ಶಾಸಕ ಚನ್ನಬಸಪ್ಪ ಸರ್ಕಾರದ ವಿರುದ್ದ ಹರಿಹಾಯ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post