ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಿವಮೊಗ್ಗದ ಈದ್ ಮಿಲಾದ್ Eid Milad ಮೆರವಣಿಗೆಯಲ್ಲಿ ಪಾಲ್ಗೊಂಡ ಯಾರೂ ಕತ್ತಿ ಗುರಾಣಿಗಳನ್ನು ಹಿಡಿದಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ HomeMinister Dr. G. Parameshwar ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಈದ್ ಮೆರವಣಿಗೆಯಲ್ಲಿ ಕತ್ತಿಗಳನ್ನು ಝಳಪಿಸಿದ್ದಾರೆ ಎಂದು ವರದಿಯಾಗಿವೆ. ಆದರೆ, ಯಾರು ಏನಾದರೂ ಹೇಳಿಕೊಳ್ಳಲಿ. ನಮಗೆ ಇರುವ ಮಾಹಿತಿಗಳ ಪ್ರಕಾರ ಮೆರವಣಿಗೆಯಲ್ಲಿ ಯಾರೂ ಸಹ ಕತ್ತಿ ಗುರಾಣಿಗಳನ್ನು ಹಿಡಿದಿರಲಿಲ್ಲ ಎಂದಿದ್ದಾರೆ.
ಈದ್ ಮೆರವಣಿಗೆ ವೇಳೆ ಶಾಂತಿ ನಗರದಲ್ಲಿ ಮಾತ್ರ ಕಲ್ಲು ತೂರಾಟ ಮಾಡಿರುವ ಘಟನೆ ವರದಿಯಾಗಿದೆಯೇ ಹೊರತು, ಮೆರವಣಿಗೆಯಲ್ಲಿ ಕತ್ತಿ ಗುರಾಣಿಗಳನ್ನು ಪ್ರದರ್ಶನ ಮಾಡಿರುವ ಕುರಿತಾಗಿ ನಮಗೆ ಯಾವುದೇ ಮಾಹಿತಿಯಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post