ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ RMManjunatha Gowda ಅವರ ನಿವಾಸಗಳ ಮೇಳೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ದಾಳಿ ED Raid ನಡೆಸಿ ತಪಾಸಣೆ ನಡೆಸಿದ್ದಾರೆ.
ತೀರ್ಥಹಳ್ಳಿಯ ಬೆಟ್ಟಮಕ್ಕಿ ಹಾಗೂ ಶಿವಮೊಗ್ಗದ ಶರಾವತಿ ನಗರದ ಸೇರಿದಂತೆ ಒಟ್ಟು ಮೂರು ನಿವಾಸಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದ ಅಧಿಕಾರಿಗಳು ತಪಾಸಣೆ ನಡೆದಿದ್ದಾರೆ.
ಒಟ್ಟು ಐದು ವಾಹನಗಳಲ್ಲಿ 15ಕ್ಕೂ ಅಧಿಕಾರಿಗಳು ವಿವಿಧ ತಂಡಗಳಾಗಿ ದಾಳಿ ನಡೆದಿದ್ದು, ಮೂರೂ ಮನೆಯ ಸುತ್ತಲೂ ಶಸ್ತçಸಜ್ಜಿತ ಪೊಲೀಸರು ಸುತ್ತುವರೆದಿದ್ದಾರೆ. ಮೂರೂ ನಿವಾಸಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಇನ್ನೂ ಮುಂದುವರೆದಿದೆ.
ಡಿಸಿಸಿ ಬ್ಯಾಂಕ್’ನಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಡೆದ ನಕಲಿ ಬಂಗಾರ ಅಡಮಾನ ಹಗರಣಕ್ಕೆ ಸಂಬAಧಿಸಿದAತೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.
ತೀರ್ಥಹಳ್ಳಿಯ ನಿವಾಸದಲ್ಲಿ ಕೇವಲ ಕೆಲಸದವರು ಮಾತ್ರ ಇದ್ದು, ಬೀಗ ಹಾಕಲಾಗಿರುವ ಎರಡು ಕೊಠಡಿಗಳನ್ನು ಅಧಿಕಾರಿಗಳು ತೆಗೆಸಿ ಪರಿಶೀಲನೆ ನಡೆದಿದ್ದಾರೆ ಎಂದು ಹೇಳಲಾಗಿದೆ.
ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post