ನಾಟಕಕ್ಕೆ ತನ್ನದೇ ಆದ ಒಂದು ವಿಶೇಷ ಗಮ್ಮತ್ತಿದೆ. ಅದು ಕಲಿತವರನ್ನು, ಕಲಿಯದವರನ್ನೂ ಕೈಬೀಸಿ ಕರೆಯುತ್ತದೆ ಎಂದು ಚಲನಚಿತ್ರ ನಟ ದೊಡ್ಡಣ್ಣ Actor Doddanna ಹೇಳಿದರು.
ನಾಟಕಕ್ಕೆ ತನ್ನದೇ ಆದ ಶಕ್ತಿ ಇದೆ. ಹೃದಯ ತಟ್ಟುತ್ತದೆ. ಅದಕ್ಕೊಂದು ಸಮ್ಮೋಹನ ಶಕ್ತಿ ಇದೆ. ಕಾವ್ಯಗಳಲ್ಲಿಯೇ ನಾಟಕ ಅತಿ ರಮ್ಯವಾದುದು. ನಾವು ನಾಟಕಗಳಿಂದಲೇ ಬೆಳೆದು ಈ ಮಟ್ಟಕ್ಕೆ ಬಂದಿದ್ದೇವೆ. ರಂಗಭೂಮಿ ಪ್ರೀತಿ, ಸಾಮರಸ್ಯ, ಸಮಾನತೆಯನ್ನು ಕಲಿಸುತ್ತದೆ ಎಂದರು.
Also read: ಕಬ್ಬು ಬೆಳೆ ಬೆಂಕಿಗಾಹುತಿ ಹಿನ್ನೆಲೆ: ತಕ್ಷಣ ಪರಿಹಾರ ನೀಡುವಂತೆ ಶಾಸಕ ಶೈಲೇಂದ್ರ ಬೆಲ್ದಾಳೆ ಆಗ್ರಹ
ಭದ್ರಾವತಿಯ ವಿಐಎಸ್‍ಎಲ್ VISL ಕಾರ್ಖಾನೆಗೆ 100 ವರ್ಷ ತುಂಬಲಿದೆ. ಮೈಸೂರು ಮಹಾರಾಜರ ಕೊಡುಗೆ ಅದು. ನಾನು ಇಲ್ಲಿ ನಾಲ್ಕನೇ ದರ್ಜೆ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ ಎಂಬುದೇ ನನಗೆ ಹೆಮ್ಮೆಯಾಗಿದೆ. ಮೈಸೂರು ಮಹಾರಾಜರು ಕೇವಲ ದಸರಾವನ್ನು ನೀಡಲಿಲ್ಲ. ಸಣ್ಣಕ್ಕಿ ತಿನ್ನಲು ಅವಕಾಶ ಮಾಡಿಕೊಟ್ಟವರು ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















