ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಳೆಯ ಚಲನಚಿತ್ರಗಳಲ್ಲಿ ಮಧುರ ಗೀತೆಗಳು ಮತ್ತು ಅದರ ಸಾಹಿತ್ಯ ಹಾಗೂ ಚಿತ್ರಕಥೆ, ನಿರ್ದೇಶನ ಎಲ್ಲವೂ ಕೂಡ ಅವಿಸ್ಮರಣೀಯವಾಗಿತ್ತು. ಇಡೀ ಕುಟುಂಬದೊಂದಿಗೆ ಚಿತ್ರಗಳನ್ನು ನೋಡಬಹುದಿತ್ತು. ಈಗಿನ ಚಿತ್ರಗಳು ಕೂಡ ಅದೇ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದರು.
ಮೊದಲ ಅವಧಿಯಲ್ಲಿ ಚಲನಚಿತ್ರ ಮತ್ತು ಸಾಹಿತ್ಯದ ಬಗ್ಗೆ ಚಿಂತಕರಾದ ಶಾಂತಾರಾಂ ಪ್ರಭು, ಎರಡನೇ ಅವಧಿಯಲ್ಲಿ ಚಲನಚಿತ್ರ ಮತ್ತು ಕಿರುಚಿತ್ರ ನಿರ್ಮಾಣದ ಬಗ್ಗೆ ಡಿ. ಸತ್ಯಪ್ರಕಾಶ್, ಚಲನಚಿತ್ರ ಛಾಯಾಗ್ರಹಣದ ಬಗ್ಗೆ ಹೆಸರಾಂತ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಮತ್ತು ನಾಲ್ಕನೆ ಅವಧಿಯಲ್ಲಿ ಹಾಡು ಹುಟ್ಟಿದ ಬಗೆ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಸ್. ಶ್ರೀಧರ ಮೂರ್ತಿ ಅವರಿಂದ ಉಪನ್ಯಾಸ ನಡೆಯಿತು.Also read: ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ | ಕಾಂಗ್ರೆಸ್‌ನಿಂದ ಟಿಕೆಟ್ ನಿರೀಕ್ಷೆ: ರಮೇಶ್ ಶೆಟ್ಟಿ
ವೇದಿಕೆಯಲ್ಲಿ ಶ್ರೀಧರಮೂರ್ತಿ, ಶಾಂತಾರಾಂ ಪ್ರಭು, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಯು.ಹೆಚ್. ವಿಶ್ವನಾಥ್, ಮಂಜುನಾಥ್, ಶಂಕರ್, ವೈದ್ಯನಾಥ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post