ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಸರಾ ಅಂಗವಾಗಿ ನಗರದಲ್ಲಿ ಅಲಂಕರಿಸಲಾಗಿರುವ ಪ್ರಖ್ಯಾತ ಬನಶಂಕರಿ ಬೊಂಬೆ ಮನೆಗೆ ನಟಿ ಅಮೃತಾ ಅಯ್ಯಂಗಾರ್ ಭೇಟಿ ನೀಡಿ ವೀಕ್ಷಿಸಿದರು.
ಬನಶಂಕರಿ ಬೊಂಬೆ ಮನೆಗೆ ಭೇಟಿ ನೀಡಿದ ಅಮೃತಾ ಅಯ್ಯಂಗಾರ್ ಅವರು ಬೊಂಬೆ ಅಲಂಕಾರ ವೀಕ್ಷಿಸಿದರು.
ಬನಶಂಕರಿ ಬೊಂಬೆ ಮನೆಯ ಅಲಂಕಾರಗಳ ಕುರಿತಾಗಿ ಚಿ. ಪೃಥು ಅದ್ವೈತ್ ಅಮೃತ ಅವರಿಗೆ ವಿವರಣೆ ನೀಡಿದ್ದು ವಿಶೇಷವಾಗಿತ್ತು. ಬಾಲಕ ಪೃಥುವಿನ ವಿವರಣೆಯ ಪರಿ ಕಂಡು ನಟಿ ಆಶ್ಚರ್ಯಚಕಿತರಾದರು.
Also read: ನ.4-5ರಂದು ವಿಐಎಸ್’ಎಲ್ ಶತಮಾನೋತ್ಸವ: ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ? ಇಲ್ಲಿದೆ ವಿವರ
ಬನಶಂಕರಿ ಬೊಂಬೆ ಮನೆಯ ಕುಟುಂಬಸ್ಥರೊಂದಿಗೆ ಅತ್ಯಂತ ಸಂತೋಷದಿಂದ ಮಾತನಾಡಿದರು.
ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಗಣೇಶ್, ವಿದ್ಯಾಸ್ಪಂದನ ಸಂಸ್ಥಾಪಕ ಅಧ್ಯಕ್ಷರಾದ ಪುನೀತ್, ಬನಶಂಕರಿ ಬೊಂಬೆ ಮನೆಯ ಪೂಜಾ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















