ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಗಾಗಲೇ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ ಆರಂಭವಾಗಿರುವ ಬೆನ್ನಲ್ಲೇ ನ.21ರಿಂದ ಹೈದರಾಬಾದ್, ತಿರುಪತಿ, ಗೋವಾ ಸೇರಿ ನಾಲ್ಕು ಮಾರ್ಗದಲ್ಲೂ ಸಂಚಾರ ಆರಂಭವಾಗಲಿದ್ದು, ಇದರೊಂದಿಗೆ ಶೀಘ್ರವೇ ನೈಟ್ ಲ್ಯಾಂಡಿಂಗ್ ಸಹ ಆರಂಭವಾಗಲಿದೆ.
ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ MP BYRaghavendra ಅವರು ವಿಮಾನ ನಿಲ್ದಾಣದ Shivamogga Airport ಕುರಿತಾಗಿ ಸಚಿವ ಎಂ.ಬಿ. ಪಾಟೀಲ್ Minister MBPatil ಅವರೊಂದಿಗೆ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಈಗಾಗಲೇ ಬೆಂಗಳೂರು-ಶಿವಮೊಗ್ಗ ನಡುವೆ ಸಂಚಾರ ಆರಂಭಗೊಂಡಿದ್ದು ನ. 21 ರಿಂದ ಹೈದರಾಬಾದ್, ತಿರುಪತಿ ಗೋವಾ ಸೇರಿ ಒಟ್ಟು 4 ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಗೊಳ್ಳಲಿದೆ. ಈ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆ ಪಡೆಯಲಾಯಿತು ಎಂದರು.
ಪ್ರಸ್ತುತ ವಿಮಾನ ನಿಲ್ದಾಣದ ತಾತ್ಕಾಲಿಕ ಪರವಾನಗಿ ನ.28ಕ್ಕೆ ಮುಕ್ತಾಯವಾಗಲಿದೆ. ಇದೇ ವೇಳೆ ನ.21ರಿಂದ ನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದ್ದು, ಆ ದಿನದ ಏಳು ದಿನದ ಒಳಗಾಗಿ ಖಾಯಂಗೊಳಿಸುವ ಕುರಿತಾಗಿ ಚರ್ಚಿಸಲಾಗಿದೆ ಎಂದರು.
ಶೀಘ್ರ ನೈಟ್ ಲ್ಯಾಂಡಿಂಗ್
ಇನ್ನು, ನೈಟ್ ಲ್ಯಾಂಡಿಂಗಾಗಿ ಆಗಬೇಕಾದ ಲೈಟಿಂಗ್ ವ್ಯವಸ್ಥೆಯ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಆನಂತರ ನೈಟ್ ಲ್ಯಾಂಡಿಂಗ್ ಆರಂಭವಾಗಲಿದೆ ಎಂದರು.
Also read: ಮೈಸೂರಿನ ಪ್ರಖ್ಯಾತ ಬನಶಂಕರಿ ಬೊಂಬೆ ಮನೆಗೆ ನಟಿ ಅಮೃತಾ ಅಯ್ಯಂಗಾರ್ ಭೇಟಿ
ನಿಲ್ದಾಣದ ಭದ್ರತೆ ಬಗ್ಗೆ ಚರ್ಚೆ
ವಿಮಾನ ನಿಲ್ದಾಣದ ಭದ್ರತೆಯ ಕುರಿತಾಗಿ ಅತ್ಯಂತ ಮಹತ್ವದ ಚರ್ಚೆ ನಡೆಸಲಾಗಿದ್ದು, ಬಾಂಬ್ ನಿಷ್ಕ್ರಿಯ ತಂಡದ ನಿಯೋಜನೆ ಮಾಡುವ ಕುರಿತಾಗಿ ಮನವಿ ಮಾಡಲಾಯಿತು.
ಇನ್ನು, ಮಂಜಿನ ವಾತಾವರಣದ ವೇಳೆಯಲ್ಲಿ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಲು ಅನುಕೂಲವಾಗುವಂತೆ, ಎಎಐ ಅಥವಾ ಆರ್’ಎನ್’ಪಿ ವ್ಯವಸ್ಥೆ ಮಾಡುವ ಕುರಿತಾಗಿ ಮಹತ್ವದ ಚರ್ಚೆ ನಡೆಸಲಾಯಿತು.
ಇದರೊಂದಿಗೆ ಬಾಕಿಯಿರುವ 58 ಎಕರೆ ಜಾಗವನ್ನು ಬಳಸಿಕೊಂಡು ವಿಮಾನಯಾನ ಸಿಬ್ಬಂದಿಗಳಿಗೆ ತರಬೇತಿ ನೀಡುವುದಾದಲ್ಲಿ ಮುಂದಿನ ದಿನಗಳಲ್ಲಿ ಅನುಕೂಲವಾಗಿದೆ ಎಂದರು.
ಸಭೆಯಲ್ಲಿ ಕೆಎಸ್’ಐಐಡಿಸಿ ಎಂಡಿ ರವಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















