ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಕನ್ನಡ ಬಳಗ ಸೋಷಿಯೋ ಕಲ್ಚರಲ್ ಅಸೋಸಿಯೇಷನ್’ನ ಜಾನಪದ ಗೀತೆ ಸ್ಪರ್ಧೆ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ನ.5ರಂದು ಆಯೋಜನೆ ಮಾಡಲಾಗಿದೆ.
ಟಿ. ನಗರದಲ್ಲಿರುವ ಡಾ.ಯು. ರಾಮ ರಾವ್ ಕಲಾಮಂಟಪದಲ್ಲಿ ಇಡೀ ದಿನ ವಿವಿಧ ಕಾರ್ಯಕ್ರಮ ನಡೆಯಲಿವೆ. ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ ಹಾಗೂ ಉದ್ಘಾಟನೆ ನಡೆಯಲಿದ್ದು, 9.30ರಿಂದ ಜಾನಪದ ಗೀತೆ ಸ್ಪರ್ಧೆ ನಡೆಯಲಿದ್ದು, 3.30-4.30ರವರೆಗೂ ತಮಿಳು, ಮಲಯಾಳಂ, ತೆಲುಗು ಭಾಷಾ ಮಿತ್ರರಿಂದ ಭಾಷಾ ಬಾಂಧವ್ಯ ಪ್ರಸ್ತುತಿ, 4.30ರಿಂದ ಕನ್ನಡ ಸಂಘಟನೆಗಳ ಸದಸ್ಯರಿಂದ ಜಾನಪದ ಗೀತೆ ಗಾಯನ ಮತ್ತು ನೃತ್ಯ, ಸಂಜೆ 5.30ರಿಂದ ಬೆಂಗಳೂರಿನ ಖ್ಯಾತ ಜನಪದ ಗಾಯಕರಾದ ಸಂತವಾಣಿ ಸುಧಾಕರ್ ಮತ್ತು ನರಸಿಂಹ ಮೂರ್ತಿ ಅವರಿಂದ ಜಾನಪದ ಸಂಗೀತ, ಸಂಜೆ 6.35ರಿಂದ ಚೆನ್ನೆÊ ಲಹರಿ ವಿಶೇಷಾಂಕ ಬಿಡುಗಡೆ ಮಾಡಲಾಗುತ್ತದೆ.

Also read: ವಿಜಯಪುರಂನಲ್ಲಿ ರೈಲು ಅಪಘಾತ: ಪ್ರಧಾನಿ ನರೇಂದ್ರ ಮೋದಿ ಸಂತಾಪ
ಕಸ್ಟಮ್ಸ್ ಉಪ ಆಯುಕ್ತ ಅಜಯ್ ಬಿದರಿ, ಕರ್ನಾಟಕ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post