ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊಳೆ ಬಸ್‌ನಿಲ್ದಾಣದ ಬಳಿ ಇರುವ ಮಲ್ಲೇಶ್ವರ ನಗರ ರೈಲ್ವೇ ಗೇಟ್ ಎಲ್‌ಸಿ ನಂ.47ರಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ MP BYRaghavendra ಕೇಂದ್ರ ರೈಲ್ವೇ ಪ್ರಾಧಿಕಾರವು ಶಿವಮೊಗ್ಗ ಮಲ್ಲೇಶ್ವರ ನಗರದಲ್ಲಿರುವ ರೈಲ್ವೇ ಗೇಟ್‌ಗೆ ಅಂಡರ್‌ಪಾಸ್ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದು, ಇದಕ್ಕಾಗಿ 6 ಕೋಟಿ ರೂ. ಅನುದಾನ ನೀಡಲಿದೆ ಎಂದರು.
ಇನ್ನು ಸಾಗರದಲ್ಲಿರುವ ಸೊರಬ ರಸ್ತೆಯ ಎಲ್‌ಸಿ ಗೇಟ್ ನಂ.130ರಲ್ಲಿ 25ಕೋಟಿ ರೂ. ವೆಚ್ಚದಲ್ಲಿ ನೂತನ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೂ ಸಹ ಅಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಹಂಚಿಕೆಗೆ ಆದೇಶಿಸಿದೆ ಎಂದರು.
Also read: ಸಾಧಕರಿಗೆ ಶ್ರೀಮಧ್ವ ವಿಜಯ ಪ್ರಶಸ್ತಿ ಪ್ರದಾನ | ಮಧ್ವ ಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ
ಈ ಎರಡೂ ಯೋಜನೆಯ ಕಾಮಗಾರಿ ಅತಿಶೀಘ್ರವೇ ಪ್ರಾರಂಭಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















