ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪೀಪಲ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) PFI ನಿಷೇಧಿಸಿದ ಕೇಂದ್ರ ಸರ್ಕಾರದ ನಿಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ Supreme Court ಪಿಎಫ್‌ಐ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಪಿಎಫ್‌ಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ಬೇಲಾ ತ್ರಿವೇದಿ ಅವರಿದ್ದ ಪೀಠ ನಿಷೇಧಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಆದೇಶವನ್ನು ಪಿಎಫ್‌ಐ ಮೊದಲು ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕು ಎಂದು ಅಭಿಪ್ರಾಯಿಸಿ ಅರ್ಜಿಯನ್ನು ವಜಾಮಾಡಿದೆ.
ಪಿಎಫ್‌ಐ ಮೇಲೆ ನಿಷೇಧ ಹೇರಿದ್ದ ಕೇಂದ್ರದ ನಿರ್ಧಾರವನ್ನು ಸಮ್ಮತಿಸಿ ಯುಎಪಿಎ ನ್ಯಾಯಾಧೀಕರಣ ಮಾರ್ಚ್ ೨೧ರಂದು ಆದೇಶ ನೀಡಿತ್ತು. ಪಿಎಫ್‌ಐ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಐದು ವರ್ಷ ಈ ಸಂಘಟನೆಯನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಸಮ್ಮತಿಸಿದ್ದ ಯುಎಪಿಎ ನ್ಯಾಯಾಧೀಕರಣದ ಆದೇಶವನ್ನು ಕೋರ್ಟ್ ಪುರಸ್ಕರಿಸಿದೆ
Also read: ಮಲ್ಲೇಶ್ವರ ನಗರ ರೈಲ್ವೇ ಗೇಟ್‌ಗೆ ನಿರ್ಮಾಣವಾಗಲಿದೆ ಅಂಡರ್‌ಪಾಸ್: ಕೇಂದ್ರದ ಅನುದಾನವೆಷ್ಟು?
ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಪಿಎಫ್‌ಐ ಮುಂದಿನ ಹೆಜ್ಜೆ ಏನು ಎಂದು ಕಾದುನೋಡಬೇಕಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















