ಕಲ್ಪ ಮೀಡಿಯಾ ಹೌಸ್ | ಲಕ್ಕವಳ್ಳಿ |
ತಣಿಗೆಬೈಲು ಭದ್ರಾ ವನ್ಯಜೀವಿ ವಲಯದ ಹರುವನಹಳ್ಳಿ ಗ್ರಾಮದ ಜಮೀನಿನನ್ನು ಅಕ್ರಮವಾಗಿ ಅಳವಡಿಸಲಾಗಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಕಾಡಾನೆಯೊಂದು ಮರಣವನ್ನಪ್ಪಿದ್ದು, ಪ್ರಕರಣ ಕುರಿತಂತೆ ದೂರು ದಾಖಲಾಗಿದೆ.
ಲಕ್ಕವಳ್ಳಿ ಹೋಬಳಿಯ ಹರುವನಹಳ್ಳಿ ಗ್ರಾಮದ ನಾಗರಾಜ್, ಹೇಮಾವತಿ ಅವರಿಗೆ ಸೇರಿದ ಜಮೀನಿನಲ್ಲಿ ಅಕ್ರಮ ಹಾಗೂ ಅನಧಿಕೃತವಾಗಿ ವಿದ್ಯುತ್ ಲೈನನ್ನು ಅಳವಡಿಸಿ, ಮೆಕ್ಕೆಜೋಳ ಬೆಳೆಯಲಾಗಿದೆ. ಈ ಪ್ರದೇಶದಲ್ಲಿ ಆಹಾರ ಅರಸಿ ಬಂದ ಗಂಡು ಕಾಡಾನೆಯೊಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ.
ನಾಗರಾಜ್ ಅವರು ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ತಂತಿ ಬೇಲಿ ನಿರ್ಮಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಇಲ್ಲಿಗೆ ಬಂದ ಕಾಡಾನೆ ತಂತಿಗೆ ಸೊಂಡಿಲನ್ನು ಸ್ಪರ್ಶಿಸಿದಾಗ ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ಹೇಳಲಾಗಿದೆ.
Also read: ಶಿವಮೊಗ್ಗ | ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಸಿಮ್ಸ್ ಮೇಲ್ದರ್ಜೆಗೆ: ಸಚಿವ ಮಧು ಬಂಗಾರಪ್ಪ
ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ತಳೆದು ಆನೆಯ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಹಾಗೂ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಅಳಡಿಸಲಾಗಿದ್ದ ತಂತಿಯನ್ನು ತೆಗೆದುಕೊಂಡು ಹೋಗಿರುವ ಕಾರಣ ಇವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿಗಳು ಲಕ್ಕವಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಪಡೆದುಕೊಂಡಿರುವ ಪೊಲೀಸರು ಎಫ್’ಐಆರ್ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post